ಆಂಧ್ರಪ್ರದೇಶ: ಕ್ರಿಕೆಟ್ ದಿಗ್ಗಜ, ಶ್ರೀಲಂಕಾದ ಹೆಸರಾಂತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧರಿತ '800' ಚಿತ್ರದ ಟ್ರೇಲರ್ ಅನ್ನು ಇಂದು ಚಿತ್ರತಂಡ ಅಧಿಕೃತವಾಗಿ ಯೂಟ್ಯೂಬ್ನಲ್ಲಿ ಬಿಡುಗಡೆಗೊಳಿಸಿದೆ.
ಇದನ್ನೂ ಓದಿ: India -Bharat Rename Row: DK Shivakumar Reaction | ಜೇಬಿನಿಂದ 500 ರೂ. ನೋಟು ತೆಗೆದು ಬಿಜೆಪಿಗೆ ಡಿಕೆಶಿ ಟಾಂಗ್
ಹಿಂದಿ ಬಾಷೆಯಲ್ಲಿ ಬಿಡುಗಡೆಗೊಂಡಿದ್ದ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಲ್ಲಿ ತನ್ನ ವಿಶೇಷ ಅಭಿನಯಕ್ಕಾಗಿ ಹೆಸರುವಾಸಿಯಾದ ಮಧುರ್ ಮಿತ್ತಲ್, '800' ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಂ.ಎಸ್. ಶ್ರೀಪತಿ ನಿರ್ದೇಶನದ ಈ ಚಿತ್ರವು ಅಕ್ಟೋಬರ್ 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಬಹುನಿರೀಕ್ಷಿತ ಸಿನಿಮಾದ ಟ್ರೇಲರ್ ಅನ್ನು ನಿರ್ಮಾಪಕ ವಿವೇಕ್ ರಂಗಾಚಾರಿ ಇಂದು ಸೋನಿ ಮ್ಯೂಸಿಕ್ ಸೌತ್ ಚಾನಲ್ನಲ್ಲಿ ಅಧಿಕೃತವಾಗಿ ರಿಲೀಸ್ ಮಾಡಿದ್ದಾರೆ.
ಕ್ರಿಕೆಟ್ ಅಖಾಡದಲ್ಲಿ ತಮ್ಮ ವಿಶಿಷ್ಟ ಸ್ಪಿನ್ ದಾಳಿಗೆ ಹೆಚ್ಚು ಖ್ಯಾತರಾದ ಮುತ್ತಯ್ಯ ಮುರಳೀಧರನ್ ಅವರ ಬಾಲ್ಯ, ಶೈಕ್ಷಣಿಕ ಮತ್ತು ಕ್ರಿಕೆಟ್ ವೃತ್ತಿಗೆ ಬಂದ ದಿನಗಳನ್ನು ದೊಡ್ಡ ಪರೆದಯ ಮುಖೇನ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಸದ್ಯ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಟ್ರೇಲರ್ ರಿಲೀಸ್ ಮಾಡಿರುವ ಚಿತ್ರತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಟ್ರೇಲರ್ನಲ್ಲಿ ಮುತ್ತಯ್ಯ ಮುರಳೀಧರನ್ ಆಗಿ ನಟಿಸಿರುವ ನಟ ಮಧುರ್ ಮಿತ್ತಲ್, ಚಿತ್ರದಲ್ಲಿ ಮುರುಳಿ ಅವರನ್ನು ಹೋಲುತ್ತಾರೆ. ಬೌಲಿಂಗ್ ಅನುಕರಣೆ ಕೂಡ ಚೆನ್ನಾಗಿ ಮೂಡಿಬಂದಿದ್ದು, ಟ್ರೇಲರ್ ಪೂರ ಮಧುರ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. "ಯಾವ ನಟ ಅಥವಾ ಯಾವ ದೇಶವನ್ನು ಪ್ರತಿನಿಧಿಸುವ ಕ್ರಿಕೆಟ್ಟಿಗ ಎಂದು ನೋಡದೆ, ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಎಲ್ಲರೂ ಈ ಸಿನಿಮಾ ವೀಕ್ಷಿಸಬೇಕು" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಟ್ರೈನ್ ಮೋಷನ್ ಪಿಕ್ಚರ್ಸ್‌ನ ವಿವೇಕ್ ರಂಗಾಚಾರಿ ನಿರ್ಮಿಸಿರುವ ಈ ಚಿತ್ರದಲ್ಲಿ ನಾಸರ್, ನರೇನ್, ಮಹಿಮಾ ನಂಬಿಯಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿಬ್ರಾನ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).