ಬಿಗ್​ಬಾಸ್ ಮನೆಯಲ್ಲಿ ಶೆಟ್ಟಿ ಡಾನ್​ಗಾಗಿ ವರನ ಹುಡುಕಾಟ 
ಸಿನಿವಾಣಿ

ಬಿಗ್‌ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಶೆಟ್ಟಿ ಡಾನ್‌ಗಾಗಿ ಶುರುವಾಯ್ತು ವರನ ಹುಡುಕಾಟ..BBK 13

  • ಬಿಗ್​ಬಾಸ್​ ಮನೆಯಲ್ಲಿ ಶೆಟ್ಟಿ ಡಾನ್​ಗಾಗಿ ವರನ ಹುಡುಕಾಟ ಸಂಭ್ರಮ

  • ಗಗನ್​​, ಯಶಸ್​​​​ ಇಬ್ಬರಲ್ಲಿ ಯಾರಾಗ್ತಾರೆ ಶೆಟ್ಟಿ ಡಾನ್​ಗೆ ವರ

  • ಬಿಗ್​ಬಾಸ್ ಮನೆಯಲ್ಲಿ ಮೋಡಿ ಮಾಡಿದ ಮದುವೆ ಟಾಸ್ಕ್

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಸದ್ಯ ಮದುವೆ ಸಂಭ್ರಮ ಜೋರಾಗಿದೆ. 'ನನ್ನ ಮದುವೆ ಮಾಡ್ಕೊ ಎಂದು ಫ್ಯಾಮಿಲಿ ಒತ್ತಾಯ ಮಾಡುತ್ತಿಲ್ಲ' ಎನ್ನುತ್ತಿದ್ದ ಸೌಂದರ್ಯಾ ಶೆಟ್ಟಿ ಮದುವೆಗೆ ವರನ ಹುಡುಕಾಟ ನಡೆದಿದೆ. ಸದ್ಯ ರಿಲೀಸ್ ಆದ ಪ್ರೊಮೋದಲ್ಲಿ ‘ಶೆಟ್ಟಿ ಡಾನ್ ಮದುವೆ’ ಎನ್ನುವ ಟಾಸ್ಕ್​​ ಕೊಡಲಾಗಿದೆ. ಪ್ರಶಾಂತ್​, ಸೌಂದರ್ಯಾ, ಕಿರಣ್​​ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಭಾರಿ ಸಂಚಲನವನ್ನು ಸೃಷ್ಟಿಸಿದೆ.

ಶೆಟ್ಟಿ ಡಾನ್​ಗಾಗಿ ವರನ ಹುಡುಕಾಟ

ರಿಲೀಸ್ ಆದ ಪ್ರೊಮೋ ಪ್ರಕಾರ, ಸೌಂದರ್ಯಾ ಶೆಟ್ಟಿ ಡಾನ್​ ರೀತಿ ಕಾಣಿಸಿಕೊಂಡಿದ್ದಾರೆ ಕಣ್ಣಿಗೆ ಗಾಗಲ್ಸ್ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಗಂಭೀರ ಹಾಗೂ ವಿಭಿನ್ನ ಲುಕ್‌ನಲ್ಲಿ ಖದರ್​ ಆಗಿ ಕಾಣಿಸಿಕೊಂಡಿದ್ದಾರೆ. ಯಶಸ್​ ಮತ್ತು ಗಗನ್​​ ವರ. ಇನ್ನೂ ಪ್ರಶಾಂತ್​- ತಾಂಡವ್​ ವಧುವಿನ ಪೋಷಕರಾಗಿ ಮಿಂಚಿದ್ದಾರೆ.

ಒಟ್ಟಾರೆಯಾಗಿ ಸೌಂದರ್ಯಾ ಶೆಟ್ಟಿಗೆ ವರನನ್ನು ಹುಡುಕುವ ಪ್ರಸಂಗ ಭಾರಿ ಮೋಡಿ ಮಾಡಿದೆ. ಇಡೀ ಮನೆಯು ವರನ ಹುಡುಕಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಶೆಟ್ಟಿ ಡಾನ್​ಗೆ ವರ ಯಾರಾಗ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಮದುವೆ ಬಗ್ಗೆ ಮಾತನಾಡಿದ್ದ ಸೌಂದರ್ಯಾ

ಈ ಹಿಂದೆ ಯಶಸ್ ಜೊತೆಗೆ ಸೌಂದರ್ಯಾ ಮಾತನಾಡುವಾಗ.. ನಾನು ಮದುವೆ ಆಗ್ತೀನಾ...ನಾನು ಅದರ ಬಗ್ಗೆ ಯೋಚನೆ ಮಾಡಿಲ್ಲ. ಯಾರೂ ನನ್ನನ್ನು ಫೋರ್ಸ್ ಮಾಡುತ್ತಿಲ್ಲ. ನನ್ನ ಅಕ್ಕನಿಗೆ ಮಾತ್ರ ಮದುವೆ ಆಗು ಅಂತ ಫೋರ್ಸ್ ಮಾಡ್ತಿದ್ದಾರೆ. ನಮ್ಮಿಬ್ಬರ ಮಕ್ಕಳನ್ನು ಎಲ್ಲಿ ಬೆಳೆಸೋಣ ಎಂದು ಯಶಸ್ ಅವರ ಬಳಿ ಸೌಂದರ್ಯಾ ಹೇಳಿದ್ದರು.

ಇವ್ರೆಲ್ಲ ನಾಮಿನೇಟ್ ಆಗಿದ್ದಾರೆ

ಆಸಿಯಾ ಫಿರ್ದೋಸ್, ಕಿರಣ್ ಶಾಸ್ತ್ರಿ, ಕುಮಾರಿ, ಜಗದೀಶ, ಗಗನ್ ಚಿನ್ನಪ್ಪ, ಪ್ರಶಾಂತ್ ಗೌಡ, ಧನುಷ್ ಮಂಜುನಾಥ್ ಈ ವಾರದ ನಾಮಿನೇಷನ್​​ ಲಿಸ್ಟ್​ನಲ್ಲಿದ್ದಾರೆ. ಈ ಎಲ್ಲರೂ ಘಟಾನುಘಟಿ ಸ್ಪರ್ಧಿಗಳೇ ಇರುವ ಕಾರಣ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್)