ಬೆಂಗಳೂರು: ಮನರಂಜನೆ, ಕ್ರೀಡೆ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಖ್ಯಾತರಾದ ಮತ್ತು ವಿವಾದಕ್ಕೆ ಗುರಿಯಾದ ವ್ಯಕ್ತಿಗಳನ್ನು ಬಿಗ್ಬಾಸ್ ಆಯೋಜಕರು ಆಯ್ಕೆ ಮಾಡಿ, ಬಿಗ್ಬಾಸ್ ಮನೆಯೊಳಗೆ ಕಳುಹಿಸುತ್ತಾರೆ. ಮನೆಗೆ ಎಂಟ್ರಿ ಕೊಡುವ ಮುನ್ನ ತಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡಿ ಅದ್ಧೂರಿಯಾಗಿ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬುದು ನಮಗೆ ಮತ್ತು ನಿಮಗೆ ಗೊತ್ತಿರುವ ಸಂಗತಿ.
ಆದರೆ, ಯಾರಿಗೂ ತಿಳಿಯದ ಸಂಗತಿ ಮನೆಯೊಳಗೆ ಪ್ರವೇಶ ನೀಡಿ ಹೊರಬಂದ ಸ್ಪರ್ಧಿಗಳಿಗೆ ಮಾತ್ರ ಗೊತ್ತಿರುತ್ತದೆ. ಅದರಲ್ಲಿ ಒಂದು ಕುತೂಹಲಕಾರಿ ಸಂಗತಿಯನ್ನು ಕಳೆದ ವಾರವಷ್ಟೇ ನಾಮಿನೇಟ್ ಆಗಿ ಹೊರಬಂದಿರುವ ಮೈಕಲ್ ಅಜಯ್ ಅವರು ಬಹಿರಂಗಪಡಿಸಿದ್ದಾರೆ.
ವಿಜಯವಾಣಿ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಮೈಕೆಲ್, ಬಿಗ್ಬಾಸ್ ಮನೆಯ ಒಳಗೆ ಸ್ಮೋಕಿಂಗ್ ಝೋನ್ ಇದೆ. ಆದರೆ, ರೂಲ್ಸ್ ಬ್ರೇಕ್ ಆದ ಬಳಿಕ ಎರಡನೇ ವಾರದಲ್ಲಿ ಝೋನ್ ಲಾಕ್ ಆಯ್ತು. ಬಳಿಕ ಓಪನ್ ಮಾಡಲೇ ಇಲ್ಲ. ಪ್ರತಿ ದಿನ ಐದು ಸಿಗರೇಟ್ಗಳನ್ನು ಕೊಡುತ್ತಿದ್ದರು. ಆದರೆ, ಬಿಗ್ಬಾಸ್ ರೂಲ್ಸ್ ಬ್ರೇಕ್ ಮಾಡಿದ ಮೇಲೆ ಮತ್ತೆ ಸಿಗರೇಟ್ ಕೊಡಲೇ ಇಲ್ಲ ಎಂದು ಮೈಕಲ್ ಹೇಳಿದರು.
ಬಿಗ್ಬಾಸ್ ಮನೆಯಲ್ಲಿ ವಿನಯ್, ಕಾರ್ತಿಕ್, ಸಂಗೀತಾ, ಪ್ರತಾಪ್ ಮತ್ತು ವರ್ತೂರು ಸಂತೋಷ್ ಟಾಪ್ ಫೈನ್ ಫೈನಲಿಸ್ಟ್ ಆಗುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ತನಿಷಾ ಬಗ್ಗೆ ಮಾತನಾಡಿದ ಅವರು ಜೋರಾಗಿ ಕೂಗಾಡುವುದೇ ತನಿಷಾ ಅವರ ಸ್ವಭಾವ. ಅದರ ಬಗ್ಗೆ ಅವರಿಗೂ ಹೆಮ್ಮೆ ಇದೆ. ಆರಂಭದಿಂದ ನನಗೂ ತನಿಷಾಗೂ ಅಷ್ಟೊಂದು ಮಾತುಕತೆ ಇರಲಿಲ್ಲ. ಆದರೆ, ಕೊನೆಯಲ್ಲಿ ಕೆಲವೊಂದಿಷ್ಟು ಸಂಘರ್ಷಗಳಾದವು ಎಂದು ಮೈಕಲ್ ಹೇಳಿದರು.
ಬಿಗ್ಬಾಸ್ ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಸ್ಫರ್ಧಿಗಳು ಗೆಲ್ಲಬೇಕೆಂಬ ಹಂಬಲದೊಂದಿಗೆ ಒಂದಿಲ್ಲೊಂದು ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್, ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ನಮ್ರತಾ ಗೌಡ ಯಾರು ಟಾಪ್ ಐದು ಸ್ಫರ್ಧಿಗಳಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.