ಸಿನಿವಾಣಿ

ಬಿಗ್​ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ : ‘ದೊಡ್ಮನೆ’ ಸ್ಪರ್ಧಿಗಳನ್ನು ಸ್ವಾಗತಿಸಿದ ನಟ ಸುದೀಪ್! Bigg Boss Kannada 12

Bigg Boss Kannada 12 : ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್​ಬಾಸ್ ಕನ್ನಡ ಸೀಸನ್ 12’ಗೆ ಭಾನುವಾರ ಸಂಜೆ 6ಕ್ಕೆ ಅದ್ದೂರಿ ಚಾಲನೆ ದೊರೆಯಿತು. ನಟ, ನಿರೂಪಕ ಸುದೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಿನ್ನ, ವಿಭಿನ್ನ, ವಿಶೇಷ ಅನಿಸುವ ಸಿನಿಮಾ, ಕಿರುತೆರೆ, ಸೋಶಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್ ಸೇರಿ ವಿವಿಧ ಕ್ಷೇತ್ರದ ಸ್ಪರ್ಧಾಳುಗಳು ‘ದೊಡ್ಮನೆ’ಯನ್ನು ಪ್ರವೇಶಿಸಿದರು. 100ಕ್ಕೂ ಹೆಚ್ಚು ದಿನಗಳ ಕಾಲ ನಡೆಯುವ ಈ ಶೋನ ಹಣಾಹಣಿಯಲ್ಲಿ ಸ್ಪರ್ಧಿಗಳ ಜಿದ್ದಾಜಿದ್ದಿನ ಆಟ, ಮೈಂಡ್ ಗೇಮ್ ಹಾಗೂ ಹೋರಾಟಕ್ಕೆ ‘ಬಿಗ್​ಬಾಸ್’ ಸಾಕ್ಷಿಯಾಗಲಿದ್ದಾರೆ.

ಪ್ರತಿ ಸೋಮವಾರದಿಂದ ಶುಕ್ರವಾರವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಹಾಟ್​ಸ್ಟಾರ್​ನಲ್ಲಿ ಪ್ರಸಾರವಾಗಲಿದೆ. ಇನ್ನು ನಟ ಸುದೀಪ್ ನಡೆಸಿಕೊಡುವ ವೀಕೆಂಡ್ ಶೋ ಪ್ರತಿ ಶನಿವಾರ-ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಕಲರ್​ಫುಲ್’ ಅರಮನೆ

‘ಬಿಗ್​ಬಾಸ್ ಕನ್ನಡ ಸೀಸನ್ 12’ರ ಮನೆಯನ್ನು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಸಾರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮೈಸೂರು ಅರಮನೆ, ಅಂಬಾರಿ ಮೆರವಣಿಗೆ, ಹಂಪಿ ಕಲ್ಲಿನ ರಥವು ಮನೆಯಲ್ಲಿ ಮೂಡಿಬಂದಿದೆ. ಇಡೀ ದೊಡ್ಮನೆ ಕಲರ್​ಫುಟ್ ಸೆಟ್​ನಿಂದ ಝುಗಮಗಗೊಳಿಸುತ್ತಿದೆ. ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುವ ಮುನ್ನವೇ ನಿರೂಪಕ ಸುದೀಪ್, ಇಡೀ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದರು.

ಕಾಕ್ರೋಚ್ ಸುಧೀ

‘ಟಗರು’ ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ‘ಕಾಕ್ರೋಚ್’ ಸುಧಿ ದೊಡ್ಮನೆಯ ಮೊದಲ ಸ್ಪರ್ಧಿಯಾಗಿ ಪ್ರವೇಶ ಪಡೆದುಕೊಂಡರು. ‘ಟಗರು’ ಚಿತ್ರದ ಮೂಲಕ ಪ್ರಸಿದ್ಧಿಯಾಗಿರುವ ಸುಧೀ, ‘ಸಲಗ’, ‘ಭೀಮ’, ‘ರಾಬರ್ಟ್’ ಸೇರಿ ಕನ್ನಡದ 80ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಾವ್ಯಾ ಶೈವ

ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಕಾವ್ಯಾ ಶೈವ ಇತ್ತೀಚೆಗೆ ತೆರೆಕಂಡಿದ್ದ ‘ಕೊತ್ತಲವಾಡಿ’ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಮಿಂಚಿದ್ದರು. ಈ ಚಿತ್ರದ ಬಳಿಕ ಕಾವ್ಯಾ ಕಿರುತೆರೆಗೆ ಮರಳಿದ್ದು, ‘ಬಿಗ್​ಬಾಸ್ ಕನ್ನಡ 12’ರ ಎರಡನೇ ಸ್ಪರ್ಧಿಯಾಗಿ ‘ದೊಡ್ಮನೆ’ ಪ್ರವೇಶಿಸಿದ್ದಾರೆ.

‘ಡಾಗ್’ ಸತೀಶ್

ಕ್ಯಾಡಬೊಮ್ ಒಕಾಮಿ ತಳಿಯ ನಾಯಿ ಸಾಕಿರುವ ಉದ್ಯಮಿ ಎಸ್.ಸತೀಶ್ ಮೂರನೇ ಸ್ಪರ್ಧಿಯಾಗಿ ‘ಬಿಗ್​ಬಾಸ್’ಗೆ ಆಗಮಿಸಿದ್ದಾರೆ. ಮೂಲತಃ ಬೆಂಗಳೂರಿನವರಾಗಿರುವ ಅವರು ಜಾಲತಾಣದಲ್ಲಿ ‘ಡಾಗ್ ಸತೀಶ್’ ಎಂದೇ ಜನಪ್ರಿಯರಾಗಿದ್ದಾರೆ. ಅವರು ದೇಶಿ-ವಿದೇಶಿ ತಳಿಯ ನಾಯಿಗಳನ್ನು ಸಾಕುತ್ತಾರೆ.

ಗಿಲ್ಲಿ ನಟರಾಜ್

ಕನ್ನಡ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ‘ಪ್ರಾಪರ್ಟಿ ಕಾಮಿಡಿ’ ಮೂಲಕವೇ ಹೆಚ್ಚು ಖ್ಯಾತಿ ಗಳಿಸಿರುವ ಮಂಡ್ಯ ಮೂಲದ ಗಿಲ್ಲಿ ನಟ ಅಲಿಯಾಸ್ ನಟರಾಜ್ ‘ಬಿಗ್​ಬಾಸ್’ನ ನಾಲ್ಕನೇ ಸ್ಪರ್ಧಿಯಾಗಿದ್ದಾರೆ. ಈಗಾಗಲೇ ಹಲವಾರು ಕಾಮಿಡಿ ರಿಯಾ ಲಿಟಿ ಶೋಗಳಲ್ಲಿ ಮಿಂಚಿರುವ ಅವರು ಮತ್ತೊಮ್ಮೆ ಕಾಮಿಡಿ ಮೂಲಕ ಕಮಾಲ್ ಮಾಡಲು ‘ದೊಡ್ಮನೆ’ಗೆ ಆಗಮಿಸಿದ್ದಾರೆ.

ಮಂಜು ಭಾಷಿಣಿ

ಕನ್ನಡದ ‘ಸಿಲ್ಲಿ ಲಲ್ಲಿ’, ‘ಮಾಯಾಮೃಗ’ ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ನಟಿ ಮಂಜು ಭಾಷಿಣಿ ‘ದೊಡ್ಮನೆ’ ಪ್ರವೇಶಿಸಿದ್ದಾರೆ. ನಟಿ ‘ಬಿಗ್​ಬಾಸ್’ಗೆ ಬರುವುದು ‘ಕ್ವಾಟ್ಲೆ ಕಿಚನ್’ನ ಗ್ರಾ್ಯಂಡ್ ಫಿನಾಲೆಯಲ್ಲಿ ಘೋಷಿಸಲಾಗಿತ್ತು. ಇದೀಗ ಅಧಿಕೃತವಾಗಿ 8ನೇ ಸ್ಪರ್ಧಿಯಾಗಿ ‘ಬಿಗ್​ಬಾಸ್’ ಮನೆ ಎಂಟ್ರಿಯಾಗಿದ್ದಾರೆ.

ಪೈಲ್ವಾನ್ ಕರಿಬಸಪ್ಪ

ದಾವಣಗೆರೆ ಮೂಲದ ಪೈಲ್ವಾನ್ ಒಬ್ಬರು ‘ಬಿಗ್​ಬಾಸ್’ ಮನೆ ಸೇರಿದ್ದಾರೆ. ಹೆಸರು ಕರಿಬಸಪ್ಪ. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿನ್ನರ್ ಆಗಿರುವ ಅವರು, ಈ ಬಾರಿ ‘ಬಿಗ್​ಬಾಸ್’ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, 15ನೇ ಸ್ಪರ್ಧಿಯಾಗಿ ‘ದೊಡ್ಮನೆ’ ಪ್ರವೇಶಿಸಿದ್ದಾರೆ.

ರಾಶಿಕಾ ಶೆಟ್ಟಿ

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರದ ಮೂಲಕ ಗಮನಸೆಳೆದಿರುವ ಚಿಕ್ಕಮಗಳೂರು ಮೂಲದ ನಟಿ ರಾಶಿಕಾ ಶೆಟ್ಟಿ 9ನೇ ಸ್ಪರ್ಧಿಯಾಗಿ ‘ದೊಡ್ಮನೆ’ಗೆ ಬಂದಿದ್ದಾರೆ. ಸದ್ಯ ಅವರು ರವಿಚಂದ್ರನ್ ಅಭಿನಯದ ‘ಪ್ಯಾರ್’ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಇನ್ನು ತೆರೆ ಮೇಲೆ ಬರಬೇಕಿದೆ.

ಮಲ್ಲಮ್ಮ

ಕಲಬುರಗಿ ಮೂಲದ ಮಲ್ಲಮ್ಮ ‘ಬಿಗ್​ಬಾಸ್’ಗೆ ಎಂಟ್ರಿ ನೀಡಿದ್ದಾರೆ. ಇನ್​ಸ್ಟಾಗ್ರಾಮ್ಲ್ಲಿ ‘ಮಲ್ಲಮ್ಮ ಟಾಕ್ಸ್’ ಎಂಬ ಪೇಜ್ ಮೂಲಕ ಅವರು ಜನಪ್ರಿಯರಾಗಿದ್ದರು. ಮಲ್ಲಮ್ಮ ಬಿಗ್​ಬಾಸ್​ಗೆ ಬರುತ್ತಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿ ಶನಿವಾರವೇ ಘೋಷಿಸಿತ್ತು. ಇದೀಗ 11ನೇ ಸ್ಪರ್ಧಿಯಾಗಿ ಅವರು ಕಾಲಿಟ್ಟಿದ್ದಾರೆ.

ಜವಾರಿ ಗಾಯಕ ಮಾಳು

‘ನಾ ಡ್ರೈವರಾ, ನೀ ನಿನ್ನ ಲವ್ವರಾ’ ಹಾಡು ಹಾಡಿರುವ ಜವಾರಿ ಜನಪದ ಗಾಯಕ ಮಾಳು ನಿಪನಾಳ ಇದೀಗ 16ನೇ ಸ್ಪರ್ಧಿ ಯಾಗಿದ್ದಾರೆ. ಜವಾರಿ ಸಾಂಗ್​ಗಳ ಮೂಲಕವೇ ಉತ್ತರ ಕರ್ನಾಟಕ ಭಾಗದಲ್ಲಿ ಮಾಳು ಪ್ರಸಿದ್ಧಿರಾಗಿದ್ದಾರೆ. ಕಳೆದ ಬಾರಿ ಹನುಮಂತನಂತೆ ಈ ಬಾರಿ ಮಾಳು ಯಾವ ರೀತಿ ಜವಾರಿ ಗಾನ ಸುಧೆ ಹರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ

ಕನ್ನಡ ರಿಯಾಲಿಟಿ ಶೋನಲ್ಲಿ ಕನ್ನಡ ಪರ ಹೋರಾಟಗಾರರು ಇರದಿದ್ದರೆ ಹೇಗೆ?. ಈ ಬಾರಿ ಕನ್ನಡ ಪರ ಹೋರಾಟ ಗಾರ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ 18ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದಿದ್ದಾರೆ. ಅವರು ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.

ನಿರೂಪಕಿ ಜಾಹ್ನವಿ

ಸುದ್ದಿ ನಿರೂಪಕಿಯಾಗಿ ಖ್ಯಾತರಾಗಿದ್ದ ಜಾನ್ವಿ ಈ ಹಿಂದೆ ‘ಗಿಚ್ಚಿ ಗಿಲಿ ಗಿಲಿ’ ಸೇರಿ ಹಲವು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ‘ಅಧಿಪತ್ರ’ ಚಿತ್ರದ ಮೂಲಕ ಬೆಳ್ಳಿತೆರೆ ಯಲ್ಲಿ ಮಿಂಚಿದ್ದರು. ಇಂತಹ ಅಪರೂಪದ ಪ್ರತಿಭೆ ಜಾನ್ವಿ ಇದೀಗ ‘ಬಿಗ್​ಬಾಸ್’ ಮನೆಗೆ 5ನೇ ಸ್ಪರ್ಧಿಯಾಗಿದ್ದಾರೆ.