ಸಿನಿವಾಣಿ

ಲ್ಯಾಗ್​ ಮಂಜ ಹೇಳಿದ್ದನ್ನು ಕೇಳಿ ಶಾಕ್​ ಆದ ದಿವ್ಯಾ ಸುರೇಶ್​: ಬಾಡಿತು ನಗು ಮುಖ..!

ಬೆಂಗಳೂರು: ಕನ್ನಡ ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿ ತನ್ನ ಮೊದಲ ವಾರ ಪೂರೈಸಿದೆ. ಈ ಹಿನ್ನೆಯಲ್ಲಿ ವಾರದ ಅಂತ್ಯದಲ್ಲಿ ನಡೆದ ವಾರದ ಕತೆ ಕಿಚ್ಚನ ಜತೆ ಎಪಿಸೋಡ್​ನಲ್ಲಿ ಸ್ಪರ್ಧಿ ದಿವ್ಯಾ ಸುರೇಶ್​ ಬಗ್ಗೆ ಕಿಚ್ಚ ಸುದೀಪ್​ ಕೇಳಿದ ಪ್ರಶ್ನೆಗೆ ಮಂಜು ಪಾವಗಡ ಕೊಟ್ಟ ಉತ್ತರ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ ಬಿಗ್​ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಮತ್ತು ಮಂಜು ಬಗ್ಗೆ ಗುಸುಗುಸು ಮಾತುಗಳು ಕೇಳಿಬರುತ್ತಿವೆ. ನಿನ್ನೆಯ ಎಪಿಸೋಡ್​ನಲ್ಲಿ ದಿವ್ಯಾ ಸುರೇಶ್​ ಬಗ್ಗೆ ಮಾತನಾಡಿದ ಮಂಜು, ದಿವ್ಯಾ ತುಂಬಾ ಬೆರೆಯುತ್ತಾಳೆ ಅಂತಾ ಎಲ್ಲರೂ ಅಂದುಕೊಳ್ಳುವ ರೀತಿ ಇರುತ್ತಾಳೆ ಮತ್ತು ತುಂಬಾ ನರಿ ಬುದ್ಧಿ ಇದೆ ಅನಿಸುತ್ತದೆ ಎಂದರು. ಮಂಜು ಆಡಿದ ಮಾತಿಗೆ ಆರಂಭದಲ್ಲಿ ನಗುವಿನಿಂದ ತುಂಬಿದ ದಿವ್ಯಾ ಮುಖ ಇದ್ದಕ್ಕಿದ್ದಂತೆ ಹೂವಿನಂತೆ ಬಾಡಿತು.

ಇದೇ ವೇಳೆ ನಿಧಿಸುಬ್ಬಯ ಕುರಿತು ಮಾತನಾಡಿದ ಮಂಜು, ಇದುವರೆಗೂ ನಾನು ತಿಳಿದುಕೊಂಡ ನಿಧಿ ಸುಬ್ಬಯ್ಯ ಅಲ್ಲವೇ ಅಲ್ಲ ಅವರು. ತುಂಬಾ ಕೆಟ್ಟದಾಗೆಲ್ಲ ಬೈದು ಬಿಡುತ್ತಾರೆ. ಅವರು ಬೈಯ್ಯುವುದು ಯಾರಿಗೂ ಗೊತ್ತಾಗುವುದಿಲ್ಲ. ದುರಾದೃಷ್ಟವಶಾತ್​ ನನ್ನ ಒಬ್ಬನಿಗೆ ಮಾತ್ರ ಕೇಳಿಸುತ್ತದೆ. ಹೇಳಿದರೆ ಯಾರು ನಂಬುವುದಿಲ್ಲ ಎಂದು ಮಂಜು ಹೇಳಿದ ಮಾತಿಗೆ ಸುದೀಪ್​ ಮತ್ತು ನಿಧಿ ಸೇರಿದಂತೆ ಇಡೀ ಮನೆಯೇ ನಗೆಗಡಲಲ್ಲಿ ತೇಲಿತು.