ಬೆಂಗಳೂರು: ಶಿವರಾಜಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ‘ಭಜರಂಗಿ 2’ ಸಿನಿಮಾ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಒಂದಷ್ಟು ಪೋಸ್ಟರ್, ಟೀಸರ್ ಮೂಲಕವೇ ಗಮನಸೆಳೆದಿರುವ ಚಿತ್ರ ನಾಯಕಿಯ ಲುಕ್ ಅನಾವರಣ ಮಾಡಿದೆ. ‘ಚಿಣಿಮಿಣಿಕಿ: ದಿ ಲೇಡಿ ಫೈರ್’ ಅಡಿಬರಹದಲ್ಲಿ ಭಾವನಾ ಮೆನನ್ ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಹಿಂದೆ ನಟಿ ಶ್ರುತಿ ಅವರ ರಗಡ್ ಲುಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಬಳಿಕ ಖಳನಾಯಕ ಸೌರವ್ ಲೋಕಿ ಅವರ ಫೋಟೋವೊಂದನ್ನು ನಿರ್ದೇಶಕರು ಹಂಚಿಕೊಂಡಿದ್ದರು. ಇದೀಗ ಭಾವನಾ ಲುಕ್ ಕುತೂಹಲ ಮೂಡಿಸಿದೆ. ಜಯಣ್ಣ ಕಂಬೈನ್ಸ್ನಲ್ಲಿ ನಿರ್ವಣವಾಗಿರುವ ಈ ಚಿತ್ರ ಇದೇ 29ರಂದು ತೆರೆಗೆ ಬರುತ್ತಿದೆ.