ಸಿನಿವಾಣಿ

ದಿವಾಕರನ ಸಾಹಸಗಳು: ಬೆಲ್ ಬಾಟಮ್ 2 ಇನ್ನಷ್ಟು ದೊಡ್ಡದಾಗಿದೆ

arunakunigal

ಬೆಂಗಳೂರು: ಬಹಳ ದಿನಗಳಿಂದ ಸುದ್ದಿಯಲ್ಲಿದ್ದ ‘ಬೆಲ್​ಬಾಟಮ್ 2’ ಚಿತ್ರಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ. ಬುಧವಾರ ಚಿತ್ರದ ಮುಹೂರ್ತವಾಗಿದ್ದು, ಪುನೀತ್ ರಾಜಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ.

‘ಬೆಲ್​ಬಾಟಮ್​ನ ಈ ಮುಂದುವರಿದ ಭಾಗಕ್ಕೆ ‘ದಿ ಕ್ಯೂರಿಯಸ್ ಕೇಸ್ ಆಫ್ ಚೆಂಡೂವ’ ಎಂಬ ಹೆಸರಿಡಲಾಗಿದೆ. ತಾನ್ಯಾ ಹೋಪ್ ಸೇರಿದಂತೆ ಒಂದಿಷ್ಟು ಹೊಸಬರ ಸೇರ್ಪಡೆಯಾಗಿದ್ದು, ಮಿಕ್ಕಂತೆ ಮೊದಲ ಭಾಗದಲ್ಲಿದ್ದ ಕಲಾವಿದರು ಮತ್ತು ತಂತ್ರಜ್ಞರು ಇಲ್ಲೂ ಮುಂದುವರಿಯಲಿದ್ದಾರಂತೆ. ಆದರೆ, ಮೊದಲ ಭಾಗಕ್ಕಿಂತ ಈ ಚಿತ್ರವು ಬಜೆಟ್, ಮನರಂಜನೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ನಾಲ್ಕು ಪಟ್ಟು ದೊಡ್ಡದಾಗಿರುತ್ತದಂತೆ. ಚಿತ್ರಕ್ಕೂ ಚೆಂಡುಹೂವಿಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಸೂಕ್ಷ್ಮವಾಗಿ ಉತ್ತರಿಸುವ ನಿರ್ದೇಶಕ ಜಯತೀರ್ಥ, ‘ಚೆಂಡುಹೂವು ಎಂದರೆ ಇಂಗ್ಲಿಷ್​ನಲ್ಲಿ ಮಾರಿಗೋಲ್ಡ್ ಎಂದರ್ಥ. ಇದರ ಸುತ್ತಲೇ ದಿವಾಕರನ ಸಾಹಸಗಳು ಮುಂದುವರಿಯುತ್ತವೆ’ ಎನ್ನುತ್ತಾರೆ.