Khushbu Sundar daughter Avantika wedding
- ಮಗಳ ಮದುವೆಗೆ ಆಮಂತ್ರಣ ಪತ್ರ ಕೊಟ್ಟ ಹಿರಿಯ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್
- ಹಿರಿಯ ಪುತ್ರಿ ಅವಂತಿಕಾ ಅವರು ಶ್ರವಣ್ ಶ್ರೀನಿವಾಸನ್ ಮದುವೆ
- ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ ಖುಷ್ಬೂ
Khushbu Sundar daughter Wedding: ರಣಧೀರ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರ ನಿವಾಸದಲ್ಲಿ ಸದ್ಯ ಮದುವೆ ಸಂಭ್ರಮದ ಕಳೆ ಮನೆ ಮಾಡಿದೆ. ಅವರ ಹಿರಿಯ ಪುತ್ರಿ ಅವಂತಿಕಾರ ಮದುವೆ ಫಿಕ್ಸ್ ಆಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಗೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ಪತ್ರವನ್ನು ನೀಡಿದ್ದಾರೆ.
ಖುಷ್ಬೂ ಸುಂದರ್ ಹಾಗೂ ಸುಂದರ್ ಪಿ, ಮಗಳು ಅವಂತಿಕಾ ಹಾಗೂ ಶ್ರವಣ್ ಶ್ರೀನಿವಾಸನ್ ಪ್ರಧಾನಿ ಮೋದಿಗೆ ಒಟ್ಟಾಗಿ ಆಮಂತ್ರಣವನ್ನು ಕೊಟ್ಟರು. ಈ ಬಗ್ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮೋದಿಯವರು ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಕುಟುಂಬಕ್ಕೆ ಸಮಯ ನೀಡಿ, ಮದುವೆಯ ಆಮಂತ್ರಣವನ್ನು ಸ್ವೀಕರಿಸಿದ್ದಲ್ಲದೆ ಭಾವಿ ದಂಪತಿಗೆ ತಮ್ಮ ಆಶೀರ್ವಾದಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಖುಷ್ಬೂ ಸುಂದರ್ ಮಗಳು ಅವಂತಿಕಾ ಯಾರು
ನಟಿ ಖುಷ್ಬೂ ಮತ್ತು ಸುಂದರ್ ಸಿ ದಂಪತಿ 2000ನೇ ಇಸವಿಯಲ್ಲಿ ವಿವಾಹವಾದರು. ಈ ತಾರಾ ದಂಪತಿಗೆ ಅವಂತಿಕಾ ಮತ್ತು ಆನಂದಿತಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಈ ಇಬ್ಬರ ಹೆಸರನ್ನು ಸೇರಿಸಿಯೇ ಖುಷ್ಬೂ ದಂಪತಿ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಗೆ 'ಅವ್ನಿ ಸಿನಿಮ್ಯಾಕ್ಸ್' ಎಂದು ಹೆಸರಿಟ್ಟು ಕಾರ್ಯ ಆರಂಭಿಸಿದ್ದರು.
ಖುಷ್ಬೂ ಅವರ ಹಿರಿಯ ಪುತ್ರಿಯಾದ ಅವಂತಿಕಾ ಅವರಿಗೆ ಸದ್ಯ 26 ವರ್ಷ ವಯಸ್ಸು. ಇವರು ಕೂಡ ಶೀಘ್ರದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ನಟಿಯಾಗಿ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇವರ ತಂಗಿ ಆನಂದಿತಾ ಈಗಾಗಲೇ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಖುಷ್ಬೂ ಸುಂದರ್ ನಟನೆಯ ಸಿನಿಮಾಗಳಿವು
ಕನ್ನಡದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳು ಖುಷ್ಬೂ ಸುಂದರ್ ಅವರ ಮುಡಿಗೇರಿತ್ತು. ರಣಧೀರ, ಅಂಜದಗಂಡು, ಶಾಂತಿ ಕ್ರಾಂತಿ ಹಿಟ್ ಸಿನಿಮಾಗಳು. ಚಿನ್ನ ತಂಬಿ, ಮನ್ನನ್, ಅಣ್ಣಾ ಮಲೈ, ಕಲಕುಲಪ್ಪು, ಗರುಡಾ ರೇಖಾ, ಆಡವಾಳ್ಳು ಮೀಕು ಜೋರ್ಹಾಲು. ಅರನ್ಮನೈ4ರಲ್ಲಿ ಬಣ್ಣ ಹಚ್ಚಿದ್ದಾರೆ. ಅಣ್ಣಾ ಅತ್ತೈ, ಕಾಯೊಪ್ಪು, ಮ್ಉಆಜಿಕ್ ಅಜ್ಜಿ ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.