ಸಿನಿವಾಣಿ

ಕವನ ಸಂಕಲನ ಬರೆದ ಆಶಿಕಾ

rameshmysuru

ಬೆಂಗಳೂರು: ಸಿನಿಮಾದ ಜತೆ ಜತೆಗೆ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ ನಟಿ ಆಶಿಕಾ ಸೋಮಶೇಖರ್. ಇದೀಗ ಆ ಬರವಣಿಗೆಯ ಆಸಕ್ತಿಯನ್ನು ಪುಸ್ತಕರೂಪದಲ್ಲಿ ಹೊರತಂದಿದ್ದಾರೆ. ‘ಪುಟ್ಟ ಮೀನಿನ ಹೆಜ್ಜೆಗಳು’ ಹೆಸರಿನ ಪುಸ್ತಕದಲ್ಲಿ ಒಟ್ಟು 50 ಕವಿತೆಗಳನ್ನು ರಚಿಸಿದ್ದಾರೆ ಆಶಿಕಾ. ಇಂಜಿನಿಯರಿಂಗ್ ಓದುತ್ತಿದ್ದ ಸಮಯದಲ್ಲಿ ಮತ್ತು ಸಮಯ ಸಿಕ್ಕಾಗಲೆಲ್ಲ ಬರೆದ ಕವಿತೆಗಳನ್ನೆಲ್ಲ ಒಂದೆಡೆ ಸೇರಿಸಿ ಮೈಲ್ಯಾಂಗ್ ಆನ್​ಲೈನ್ ವೇದಿಕೆಯಲ್ಲಿ ಪ್ರಕಟಿಸಿದ್ದಾರೆ.

‘ಬರವಣಿಗೆ ಮೇಲೆ ಮೊದಲಿಂದಲೂ ಆಸಕ್ತಿ. ಪುಸ್ತಕ ರೂಪದಲ್ಲಿ ಹೊರತರುವ ಪ್ಲಾನ್ ಇರಲಿಲ್ಲ. ಆನ್​ಲೈನ್ ವೇದಿಕೆ ಸಿಕ್ಕ ಹಿನ್ನೆಲೆಯಲ್ಲಿ ‘ಪುಟ್ಟ ಮೀನಿನ ಹೆಜ್ಜೆಗಳು’ ಹೆಸರಲ್ಲಿ ಪ್ರಕಟಿಸಿದ್ದೇನೆ. ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಮತ್ತಷ್ಟು ಕವಿತೆಗಳನ್ನು ಬರೆಯುವಂತೆ ಪ್ರೊತ್ಸಾಹಿಸುತ್ತಿದ್ದಾರೆ’ ಎನ್ನುತ್ತಾರೆ ಆಶಿಕಾ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಶಿಕಾ ನಟನೆಯ ‘ಮುಂದುವರಿದ ಅಧ್ಯಾಯ’ ಸಿನಿಮಾ ಕೆಲಸ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಸೋಮು ಹೊಯ್ಸಳ ನಿರ್ದೇಶನದ ‘ವಿಕಿಪೀಡಿಯಾ’ ಎಂಬ ಹೊಸ ಸಿನಿಮಾದಲ್ಲೂ ಆಶಿಕಾ ನಟಿಸುತ್ತಿದ್ದಾರೆ.