ಸಿನಿವಾಣಿ

ಬಾಕ್ಸರ್ ಅವತಾರದಲ್ಲಿ ಆರ್ಯ; ‘ಸರ್ಪಟ್ಟಾ ಪರಾಂಬರೈ’ ಫಸ್ಟ್​ ಲುಕ್ ಬಿಡುಗಡೆ

ಚೆನ್ನೈ: ಕಾಲಿವುಡ್​ನ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್​ ಹೊರಬಿದ್ದಿದೆ. ನಟ ಆರ್ಯ ಮತ್ತು ಪಾ. ರಂಜಿತ್ ಕಾಂಬಿನೇಷನ್​ನಲ್ಲಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ಸರಪಟ್ಟಾ ಪರಾಂಬರೈ ಎಂದು ಶೀರ್ಷಿಕೆ ಇಡಲಾಗಿದ್ದು, ಬಾಕ್ಸರ್​ ಅವತಾರದಲ್ಲಿ ಆರ್ಯ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ.

ರಜನಿಕಾಂತ್ ಜತೆಗಿನ ಕಾಲ ಸಿನಿಮಾ ಹಿಟ್ ಆದ ಬಳಿಕ ಅಂದರೆ ಎರಡು ವರ್ಷದ ಬಳಿಕ ಈ ಸಿನಿಮಾ ಮೂಲಕ ಪ ರಂಜಿತ್​ ಆಗಮಿಸುತ್ತಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದ್ದು, ಚಿತ್ರದಲ್ಲಿನ ಆರ್ಯ ಲುಕ್​ ಮತ್ತು ಹಿನ್ನೆಲೆಯಲ್ಲಿನ ದೃಶ್ಯಾವಳಿಗಳು ಸಾಕ್ಷ್ಯ ಒದಗಿಸಿವೆ.

ತಮಿಳಿನಲ್ಲಿ ತೆರೆಗೆ ಬಂದಿದ್ದ ಬೊದಾಯ್ ಯೇರಿ ಬುಧಿ ಮಾರಿ ಚಿತ್ರದಲ್ಲಿ ನಟಿಸಿದ್ದ ದುಶರಾ ವಿಜಯನ್, ಸರಪಟ್ಟಾ ಪರಾಂಬರೈ ಚಿತ್ರದಲ್ಲಿ ನಾಯಕಿಯಾಗಿ ಆರ್ಯಗೆ ಜೋಡಿತಯಾಗಿದ್ದಾರೆ. ಸಂತೋಷ್ ಪ್ರತಾಪ್​ ನೆಗೆಟಿವ್​ ಲೀಡ್​ನಲ್ಲಿ ನಟಿಸುತ್ತಿದ್ದಾರೆ.

ಇನ್ನುಳಿದಂತೆ ಸದ್ಯ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಜತೆಗೆ ಒಂದಷ್ಟು ಬೇರೆ ಬೇರೆ ಸುದ್ದಿಗಳೂ ಈ ಸಿನಿಮಾ ಬಗ್ಗೆ ಕೇಳಿಬರುತ್ತಿವೆ. 2017ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದಿದ್ದ ಬಾಕ್ಸಿಂಗ್​ ಹಿನ್ನೆಲೆಯ ‘ಮುಕಾಬಾಜ್‘ ಚಿತ್ರದ ರಿಮೇಕ್​ ಎನ್ನಲಾಗುತ್ತಿದೆ. ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ಚಿತ್ರತಂಡವೇ ಉತ್ತರಿಸಬೇಕಿದೆ. (ಏಜೆನ್ಸೀಸ್​)