ಮುಂಬೈ: ಕರೊನಾ ಭಯದ ನಡುವೆಯೂ ನವರಾತ್ರಿ ಹಬ್ಬ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಈ ಬಾರಿಯ ನವರಾತ್ರಿಯನ್ನು ದೇಶದೆಲ್ಲೆಡೆ ಸರಳವಾಗಿ ಆಚರಿಸಲಾಗುತ್ತಿದ್ದು, ಹಲವು ಸೆಲೆಬ್ರಿಟಿಗಳು ತಮ್ಮ ಮನೆಯ ನವರಾತ್ರಿ ಸಂಭ್ರಮವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಬೇರೆಯವರೆಲ್ಲಾ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರೆ, ಬಾಲಿವುಡ್ ನಟಿ ಅನೂಷ್ಕಾ ಶರ್ಮ ಮಾತ್ರ ತಾವು ಮಿಸ್ ಮಾಡಿಕೊಳ್ಳುತ್ತಿರುವ ಒಂದು ವಿಷಯವನ್ನು ಎಲ್ಲರ ಜತೆಗೆ ಶೇರ್ ಮಾಡಿಕೊಂಡಿದ್ದಾರೆ. ಇಷ್ಟಕ್ಕೂ ಅನೂಷ್ಕಾ ಏನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಸಹಜವೇ. ಅದಕ್ಕೆ ಉತ್ತರ ಇಲ್ಲಿದೆ.
ಇಂದು ದುರ್ಗಾಷ್ಟಮಿ. ಈ ದಿನದಂದು ಉತ್ತರ ಭಾರತದಲ್ಲಿ ಪೂರಿ, ಹಲ್ವಾ ಮುಂತಾದ ಖಾದ್ಯಗಳನ್ನು ಹಬ್ಬದ ಸಲುವಾಗಿ ಮಾಡಲಾಗುತ್ತದಂತೆ. ಆದರೆ, ಸದ್ಯದಲ್ಲೇ ತಾಯಿಯಾಗಲಿರುವ ಅನೂಷ್ಕಾಗೆ ಮಾತ್ರ ಕಾರಣಾಂತರಗಳಿಂದ ಹಬ್ಬದ ಅಡುಗೆಯನ್ನು ಸವಿಯಲಾಗುತ್ತಿಲ್ಲವಂತೆ.
ಹಾಗಾಗಿ ದುರ್ಗಾಷ್ಟಮಿಯ ಸಾಂಪ್ರದಾಯಿಕ ಅಡುಗೆಯ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಅವರು, ಮಿಸ್ಸಿಂಗ್ ದಿಸ್ ಟುಡೆ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.