ನವದೆಹಲಿ: ನಟ, ಬಿಜೆಪಿ ಸಂಸದ ರವಿ ಕಿಶನ್ ವಿರುದ್ಧ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಇಂದು ಒಂದು ಗಂಭೀರ ಆರೋಪ ಮಾಡಿದ್ದರು. ರವಿ ಕಿಶನ್ ಅವರ ದಿನ ಶುರುವಾಗ್ತಿದ್ದಿದ್ದೇ ವೀಡ್ (ಮಾದಕ ವಸ್ತು)ನಿಂದ ಎಂದಿದ್ದರು.
ಬಿಜೆಪಿ ಸಂಸದನಾಗಿರುವ ರವಿಕಿಶನ್ ಸಂಸತ್ತಿನಲ್ಲಿ, ಬಾಲಿವುಡ್ನ ಡ್ರಗ್ಸ್ ದಂಧೆ ಬಗ್ಗೆ ಮಾತನಾಡಿದ್ದರು. ಮಾದಕ ವಸ್ತು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದರು. ಅದಾದ ಕೆಲವೇ ಹೊತ್ತಲ್ಲಿ ಅನುರಾಗ್ ಕಶ್ಯಪ್, ರವಿ ಕಿಶನ್ ಅವರು ಮಾದಕ ದ್ರವ್ಯ ವ್ಯಸನಿಯಾಗಿದ್ದರು. ನಾನು ಅವರೊಂದಿಗೆ ಸಿನಿಮಾ ಮಾಡಿದ್ದೇನೆ ಎಂದು ಹೇಳಿದ್ದರು.
ಇದೀಗ ಅನುರಾಗ್ ಕಶ್ಯಪ್ ಹೇಳಿಕೆಗೆ ಸಂಸದ ರವಿಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ. ಅನುರಾಗ್ ಕಶ್ಯಪ್ ಅವರಿಂದ ಇಂಥ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ..ಇದರಿಂದಾಗಿ ತುಂಬ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ತಮ್ಮ ವಿರುದ್ಧ ಮಾಡಲಾದ ಆರೋಪವನ್ನು ನಿರಾಕರಿಸುವ ಗೋಜಿಗೂ ಹೋಗದ ರವಿ ಕಿಶನ್, ನನ್ನ ಹಿಂದಿನ ಬದುಕಿನ ಬಗ್ಗೆ ನಾನ್ಯಾರಿಗೂ ಸಮರ್ಥನೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಸ್ಕೆಗೆ 163 ರನ್ಗಳ ಗುರಿ ನೀಡಿದ ಮುಂಬೈ ಇಂಡಿಯನ್ಸ್; ಲುಂಗಿ ಎನ್‌ಜಿಡಿಗೆ 3 ವಿಕೆಟ್
ನಾನು ಖಂಡಿತ ನನ್ನ ಹಿಂದಿನ ಬದುಕಿನ ಬಗ್ಗೆ ಯಾರಿಗೂ ಸಮರ್ಥನೆ ನೀಡುವುದಿಲ್ಲ. ಬಾಲಿವುಡ್ನ ಡ್ರಗ್ಸ್ ಮಾಫಿಯಾ ಒಂದು ಗಂಭೀರ ವಿಷಯ. ಅದರ ವಿರುದ್ಧ ಹೋರಾಡಬೇಕು. ಇಡೀ ದೇಶಕ್ಕೇ ಮನವಿ ಮಾಡುತ್ತಿದ್ದೇನೆ..ಜತೆಗೆ ಅನುರಾಗ್ ಕಶ್ಯಪ್ಗೂ ಹೇಳುತ್ತಿದ್ದೇನೆ. ನೀವು ಬೇಜವಾಬ್ದಾರಿಯುತವಾಗಿ ಮಾತನಾಡುವ ಮೊದಲು ಒಮ್ಮೆ ಯೋಚಿಸಿ ಎಂದು ರವಿ ಕಿಶನ್ ಖಡಕ್ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಎಂಟೇ ತಿಂಗಳಲ್ಲಿ 3,186 ಸಲ ಕದನವಿರಾಮ ಉಲ್ಲಂಘಿಸಿದ ಪಾಕ್! ಕಳೆದ 17 ವರ್ಷಗಳಲ್ಲೇ ಇದು ಅತ್ಯಧಿಕ…
ಅನುರಾಗ್ ಕಶ್ಯಪ್ ಆರೋಪ ಹೀಗಿತ್ತು...
ರವಿ ಕಿಶನ್ ಅವರು ನನ್ನ ಮುಕ್ಕಾಬಾಜ್ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಶಿವನ ಭಕ್ತ..ಬೆಳಗ್ಗೆ ಜೈ ಶಿವ ಶಂಕರ್..ಜೈ ಭಂ ಭೋಲೆ..ಜೈ ಶಿವ್ ಶಂಭು ಎಂದು ಹೇಳುವ ಮೂಲಕ ದಿನ ಪ್ರಾರಂಭಿಸುತ್ತಿದ್ದರು. ಹಾಗೇ ವೀಡ್ (ಮಾದಕ ದ್ರವ್ಯ) ಕೂಡ ಪ್ರತಿದಿನವೂ ಬೇಕಿತ್ತು. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಸಂಸದರಾಗಿದ್ದಾರೆ...ಹಾಗಾಗಿ ಆ ವ್ಯಸನವನ್ನು ಬಿಟ್ಟಿರಬಹುದು ಎಂದು ಅನುರಾಗ್ ಕಶ್ಯಪ್ ಹೇಳಿದ್ದರು.
ಅಷ್ಟೇ ಅಲ್ಲ ಅವರು ವೀಡ್ ಸೇವನೆ ಮಾಡಿದಾಕ್ಷಣ ಕೆಟ್ಟದಾಗಿ ವರ್ತನೆ ಮಾಡುತ್ತಿರಲಿಲ್ಲ. ಅವರ ಕೆಲಸವನ್ನು ತುಂಬ ಶಿಸ್ತಿನಿಂದ ಅತ್ಯುತ್ತಮವಾಗಿಯೇ ಮಾಡುತ್ತಿದ್ದರು ಎಂದೂ ತಿಳಿಸಿದ್ದರು.(ಏಜೆನ್ಸೀಸ್)