ಸಿನಿವಾಣಿ

ಕರೊನಾ ಗೆದ್ದ ಅನುಪಮ್​ ಖೇರ್​ ಕುಟುಂಬ; ಆಸ್ಪತ್ರೆಯಿಂದ ಎಲ್ಲರೂ ಡಿಸ್ಚಾರ್ಜ್​

ಬಚ್ಚನ್‌ ಕುಟುಂಬಕ್ಕೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ನಟ ಅನುಪಮ್‌ ಖೇರ್‌ ಅವರ ಕುಟುಂಬದಿಂದಲೂ ಸೋಂಕಿನ ಸುದ್ದಿ ಬಂದಿತ್ತು. ಅನುಪಮ್ ಖೇರ್ ಅವರ ತಾಯಿ ದುಲಾರಿ ಮತ್ತು ಸಹೋದರ ರಾಜು ಖೇರ್​ಗೆ ಸೋಂಕು ತಗುಲಿರುವುದು ಇತ್ತೀಚೆಗಷ್ಟೇ ದೃಢಪಟ್ಟಿತ್ತು. ಇದೀಗ ವಾರದ ಬಳಿಕ ಸೋಂಕಿನಿಂದ ಗುಣಮುಖರಾಗಿ ಮರಳಿದ್ದಾರೆ.

ಕುಟುಂಬ ಸದಸ್ಯರಿಗೆ ಕರೊನಾ ಸೋಂಕು ತಗುಲುತ್ತಿದ್ದಂತೆ, ನಟ ಅನುಪಮ್‌ ಖೇರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದರು. ನನ್ನ ತಾಯಿಗೆ ಕರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಮಾಹಿತಿ ನೀಡಿದ್ದರು.

ಇದೀಗ ತಾಯಿ ದುಲಾರಿ ಮನೆಗೆ ಮರಳಿದ್ದು, ಹೋಮ್​ ಕ್ವಾರಂಟೈನ್​ನಲ್ಲಿದ್ದಾರೆ. ಸಹೋದರ ರಾಜು ಸೇರಿ ಇನ್ನೂ ಹಲವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕುಟುಂಬದ ಸದಸ್ಯರ ಆಗಮನವಾದ ಬಗ್ಗೆ ವಿಡಿಯೋ ಮಾಡಿ ಸೋಷಿಯಲ್​ ಮಿಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮತ್ತು ಬೃಹನ್​ ಮುಂಬೈ ಕಾರ್ಪೋರೇಷನ್​ ಅವರ ಸಹಕಾರವನ್ನೂ ಅನುಪಮ್​ ನೆನೆದಿದ್ದಾರೆ.