ಸಿನಿವಾಣಿ

ಕೇಳಿ ಬಂತು ಕಾವ್ಯಾ ಮಾರನ್ ಮದುವೆ ಸುದ್ದಿ: ಖ್ಯಾತ ಮ್ಯೂಸಿಕ್​ ಡೈರೆಕ್ಟರ್ ವರನಂತೆ!?​ Kavya Maran

Kavya Maran : ದಕ್ಷಿಣ ಭಾರತ ಸಿನಿಮಾ ರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್​ ರೈಸರ್ಸ್​ ಹೈದರಾಬಾದ್​ ತಂಡದ ಒಡತಿ ಕಾವ್ಯಾ ಮಾರನ್ ಕುರಿತು ವದಂತಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಇಬ್ಬರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರಂತೆ!

ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತು. ಇದೀಗ ಮದುವೆಯ ಸುದ್ದಿ ಹರಿದಾಡುತ್ತಿದೆ. 33 ವರ್ಷದ ಕಾವ್ಯಾ ಮಾರನ್ ಸನ್ ಗ್ರೂಪ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ. ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ 2024 ರಿಂದ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅನಿರುದ್ಧ್​ ಆಗಲಿ, ಕಾವ್ಯಾ ಮಾರನ್​ ಆಗಲಿ ಎಲ್ಲೂ ಮಾತನಾಡಿಲ್ಲ.

ಅನಿರುದ್ಧ್ ಮತ್ತು ಕಾವ್ಯಾ ಇತ್ತೀಚೆಗೆ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆ ಅಭಿಮಾನಿಗಳು ಮಾತನಾಡುತ್ತಿದ್ದರು. ಇದರ ಬೆನ್ನಲ್ಲೇ ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಮದುವೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ವರದಿಗಳು ಬಂದಿಲ್ಲ. ಮೇಲ್ನೋಟಕ್ಕೆ ಇದೊಂದು ವದಂತಿಯ ರೀತಿ ಕಾಣುತ್ತಿದೆ.

ಅನಿರುದ್ಧ್​​ ಅವರು ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಶಾರುಖ್​ ಖಾನ್​ ನಟನೆಯ ಜವಾನ್​ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅನಿರುದ್ಧ್​​ ಅವರು ಕೇವಲ ಸಂಗೀತ ನಿರ್ದೇಶಕ ಮಾತ್ರವಲ್ಲ ಒಳ್ಳೆಯ ಗಾಯಕ ಕೂಡ ಹೌದು. ಸಂಗೀತ ನಿರ್ದೇಶನಕ್ಕಾಗಿ ಅನಿರುದ್ಧ್​ ಅವರು ಪ್ರತಿ ಚಿತ್ರಕ್ಕೂ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ.

ಇನ್ನು ಕಾವ್ಯಾ ಮಾರನ್​ ಅವರ ವಿಚಾರಕ್ಕೆ ಬರುವುದಾದರೆ, ಐಪಿಎಲ್​ ಸಮಯದಲ್ಲಿ ಕಾವ್ಯಾ ಅವರು ತುಂಬಾ ಸುದ್ದಿಯಲ್ಲಿರುತ್ತಾರೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪಂದ್ಯಗಳ ಸಮಯದಲ್ಲಿ ಗ್ಯಾಲರಿಯಲ್ಲಿ ಯಾವಾಗಲೂ ಹಾಜರಾಗಿರುತ್ತಾರೆ. ತಂಡದ ಆಟಗಾರರು ಬೌಂಡರಿ ಬಾರಿಸಿದಾಗ ಅಥವಾ ಔಟ್​ ಆದಾಗ ಕಾವ್ಯಾ ನೀಡುವ ಮುಖಭಾವ ವೈರಲ್​ ಆಗುತ್ತಲೇ ಇರುತ್ತದೆ. ತಂಡ ಗೆದ್ದಾಗ ಕಾವ್ಯ ಸಂಭ್ರಮದಿಂದ ಆಚರಿಸುವ ಮತ್ತು ಸೋತಾಗ ನಿರಾಶೆಗೊಂಡಂತೆ ಕಾಣುವ ಚಿತ್ರಗಳು ಜಾಲತಾಣದಲ್ಲಿ ಸಂಚಲನ ಮೂಡಿಸಿವೆ. (ಏಜೆನ್ಸೀಸ್​)