ಸಿನಿವಾಣಿ

ಅದರ ಮೇಲೆಯೇ ಕಣ್ಣು… ಬಟ್ಟೆ ಬಿಚ್ಚಿದ್ದನ್ನು ಟ್ರೋಲ್​ ಮಾಡಿದವರಿಗೆ ಖಡಕ್​ ಉತ್ತರ ಕೊಟ್ಟ ಅನಸೂಯಾ!

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯಾ ಭಾರದ್ವಾಜ್ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿದ ಅನಸೂಯಾ ನಂತರ ಆ್ಯಂಕರ್ ಆಗಿ, ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಮೂಲಕ ಸೆಲೆಬ್ರಿಟಿಯಾದರು. ಅದರಲ್ಲೂ ತಮ್ಮ ಸೌಂದರ್ಯ ಮತ್ತು ಅಭಿನಯದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದಿದ್ದಾರೆ. ಆದರೆ, ಅನಸೂಯಾ ಅವರಿಗೆ ವಿವಾದಗಳು ಹೊರತಲ್ಲ. ಅದರಲ್ಲೂ ತನ್ನ ಹಾಟ್​ ಡ್ರೆಸ್‌ಗಳಿಂದಲೇ ಆಗಾಗ ಟ್ರೋಲ್‌ಗೆ ಒಳಗಾಗುತ್ತಕೇ ಇರುತ್ತಾರೆ. ಆದರೆ, ಇದ್ಯಾವುದಕ್ಕೂ ಅವರು ಕ್ಯಾರೆ ಎನ್ನುವುದಿಲ್ಲ. ಇದೀಗ ಡ್ರೆಸ್​ ವಿಚಾರಕ್ಕೆ ಅನಸೂಯಾ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

ಕಳೆದ ಕೆಲ ದಿನಗಳಿಂದ ಬೆಳ್ಳಿತೆರೆಯಲ್ಲಿ ರಂಜಿಸುತ್ತಾ ಕಿರುತೆರೆಯಿಂದ ದೂರ ಉಳಿದಿದ್ದ ಅನಸೂಯಾ ಇತ್ತೀಚೆಗೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಕಿರಿಕ್ ಬಾಯ್ಸ್ ಕಿಲಾಡಿ ಗರ್ಲ್ಸ್ ಎಂಬ ಹೊಸ ಶೋ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಯಿತು. ಪ್ರೋಮೋದಲ್ಲಿ ಶೇಖರ್ ಮಾಸ್ಟರ್ ಮತ್ತು ಅನಸೂಯಾ ಇಬ್ಬರೂ ಸ್ಪರ್ಧೆಗೆ ತಯಾರಾಗುತ್ತಿರುವ ದೃಶ್ಯವಿದೆ. ಅನಸೂಯಾ ಅವರು ತನ್ನ ಜಾಕೆಟ್ ಅನ್ನು ಎಲ್ಲರ ಮುಂದೆಯೇ ತೆರೆಯುತ್ತಾರೆ. ಅತ್ತ ಶೇಖರ್ ಮಾಸ್ತರ್ ಕೂಡ ಅಂಗಿ ಕಳಚುತ್ತಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಈ ಪ್ರೋಮೋ ನೋಡಿದ ನೆಟ್ಟಿಗರು ಅನಸೂಯಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದ್ರೆ ಅನಸೂಯಾ ಯಾವುದೇ ಟ್ರೋಲ್​ಗಳಿಗೆ ಹೆದರದೆ ಕೆಟ್ಟ ಕಾಮೆಂಟ್​ಗಳಿಗೆ ಸಖತ್ ಉತ್ತರ ನೀಡುತ್ತಿದ್ದಾರೆ.

ಪ್ರೋಮೋ ಶೇರ್​ ಮಾಡಿಕೊಂಡಿರುವ ಎಕ್ಸ್​ ಬಳಕೆದಾರನೊಬ್ಬ ಇದು ಯಾವ ರೀತಿಯ ನಾನ್​ಸೆನ್ಸ್​? ಅನಸೂಯಾ ಅವರು ಬಲಿಪಶು ಕಾರ್ಡ್ ಪ್ಲೇ ಮಾಡ್ತಿದ್ದಾರೆ ಎಂದು ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಅನಸೂಯಾ, ನೀವು ಹಾಕಿರುವ ಎಮೋಜಿಗಳನ್ನು ನೋಡಿದರೆ ನಿಮ್ಮ ಮೈಂಡ್ ಸೆಟ್ ಗೊತ್ತಾಗುತ್ತದೆ. ನೀವು ಯಾಕೆ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದೀರಿ ಎಂದು ನನಗೆ ತಿಳಿಯಬಹುದೇ? ಎಂದು ಪ್ರತಿದಾಳಿ ನಡೆಸಿದ್ದಾರೆ. ಮತ್ತೊಬ್ಬ ನೆಟ್ಟಿಗ, ನಿಮಗೆ ನಿಜವಾಗ್ಲೂ ಅರ್ಥ ಆಗ್ತಿಲ್ವಾ? ಈ ಶೋಗಳು ಹೇಗೆ ನಡೆಯುತ್ತಿವೆ? ನಿಮ್ಮ ಚಾರಿತ್ರ್ಯ ಉತ್ತಮವಾಗಿರಬೇಕೆ ಹೊರತು ಕೆಟ್ಟದಾಗಬಾರದು. ಜನರು ನಿಮ್ಮನ್ನು ನಟಿಯಾಗಿ ಇಷ್ಟಪಡುತ್ತಾರೆ. ಆದರೆ, ಇಂತಹ ಕೆಲಸಗಳನ್ನು ಮಾಡದಿರುವುದು ಒಳಿತು ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್‌ಗೂ ಅನಸೂಯಾ ಸಖತ್‌ ಕೌಂಟರ್‌ ಕೊಟ್ಟಿದ್ದಾರೆ. ಸಿನಿ ಉದ್ಯಮದ ಜನರಾಗಿ ನಾವು ಕೆಲವು ವಿಷಯಗಳನ್ನು ಅನ್ವೇಷಿಸಬೇಕಾಗಿದೆ. ಅಲ್ಲದೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕೆಲವು ಬದಲಾವಣೆಗಳು ಅಗತ್ಯ ಎನ್ನುವ ಮೂಲಕ ಪ್ರೇಕ್ಷಕರು ಹೆಚ್ಚಾಗಿ ಏನನ್ನು ಬಯಸುತ್ತಾರೆ ಅದನ್ನೇ ಮಾಡುತ್ತೇವೆ ಎಂದು ಬೋಲ್ಡ್​ ಉತ್ತರ ನೀಡಿದ್ದಾರೆ.

ಸಿನಿಮಾಗಳಲ್ಲಿ ಎಷ್ಟೇ ಆಕ್ಷೇಪಾರ್ಹ ವಿಷಯಗಳು ಬಂದರೂ ಬ್ಲಾಕ್ ಬಸ್ಟರ್ ಹಿಟ್ ಮಾಡುತ್ತೀರಿ. ಆದರೆ, ಟಿವಿಯಲ್ಲಿ ಪ್ರೋಮೋಗಳನ್ನು ನೋಡುವ ಮೂಲಕ ಕೆಲವನ್ನು ನಿರ್ಣಯಿಸುತ್ತಾರೆ. ಕೆಲವರಿಗೆ ಪ್ಯಾಂಟ್ ಮತ್ತು ಶರ್ಟ್‌ಗಳ ಮೇಲೆಯೇ ಕಣ್ಣು. ಪ್ಯಾಂಟ್​ ಮತ್ತು ಶರ್ಟ್​ಗಳ ಸಮಸ್ಯೆಯೂ ಇದೆ. ನಾನು ಹೇಳಿದ್ದು ನಿಮಗೆ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರೋಲಿಗರಿಗೆ ಅನಸೂಯಾ ಖಡಕ್​ ತಿರುಗೇಟು ನೀಡಿದ್ದಾರೆ. ಸದ್ಯ ಅನಸೂಯಾ ನೆಟ್ಟಿಗರಿಗೆ ನೀಡಿರುವ ಕೌಂಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನಸೂಯಾ ಸದ್ಯ ‘ಪುಷ್ಪ 2’ ಚಿತ್ರದಲ್ಲಿ ದಾಕ್ಷಾಯಣಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಡಿಸೆಂಬರ್​ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)