ಹೈದರಾಬಾದ್: ಸಮಂತಾ ರುತು ಪ್ರಭು ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಡಿಲೀಟ್ ಮಾಡುವ ಮೂಲಕ ವಿವಾದವೊಂದನ್ನು ಹುಟ್ಟುಹಾಕಿದರು.
ಸಮಂತಾ ಅವರು ಬಟ್ಟೆಯನ್ನೇ ಧರಿಸದ ಫೋಟೋವನ್ನು ತಮ್ಮಷ್ಟಕ್ಕೆ ತಾವೇ ಶೇರ್ ಮಾಡಿಕೊಂಡಿದ್ದಾರೆ ಎಂದು ಕೆಲವರು ವಾದಿಸಿದರು. ಅಲ್ಲದೆ, ಸಮಂತಾ ಬಾತ್ಟಬ್ನಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು. ಫೋಟೋದಲ್ಲಿ ಸಮಂತಾ ಬೆತ್ತಲೆಯಾಗಿ ಬಾತ್ಟಬ್ನಲ್ಲಿ ಕುಳಿತಿದ್ದಾರೆ ಎಂದು ವಾದಿಸಲಾಯಿತು. ಮತ್ತೊಂದು ಫೋಟೋದಲ್ಲಿ ಸಮತಾ ಕೇವಲ ಟವಲ್ ಸುತ್ತಿಕೊಂಡು ಕುಳಿತಿರುವ ದೃಶ್ಯವಿದೆ. ಆದರೆ, ಇದು ತಿರುಚಿದ ಫೋಟೋಗಳು ಎಂದು ಸಮಂತಾ ಅಭಿಮಾನಿಗಳು ಪ್ರತಿವಾದಿಸಿದರು.
ಅಭಿಮಾನಿಗಳು ಸಮಂತಾ ಬೆಂಬಲಕ್ಕೆ ನಿಂತು, ಅವರ ಕುರಿತಾದ ನಕಲಿ ಫೋಟೋಗಳನ್ನು ಶೇರ್ ಮಾಡಿ, ಟ್ರೋಲ್ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಮಂತಾರ ಅಪ್ಪಟ್ಟ ಅಭಿಮಾನಿಯೊಬ್ಬ ತಿರುಚಿದ ಫೋಟೋಗಳನ್ನು ತುಂಬಾ ಆಳವಾಗಿ ತನಿಖೆ ನಡೆಸಿ, ಒರಿಜಿನಲ್ ಫೋಟೋವನ್ನು ಕೊನೆಗೂ ಪತ್ತೆಹಚ್ಚಿದ್ದಾನೆ.
ತಿರುಚಲಾದ ಪೊಟೋಗಳಲ್ಲಿ ಒಂದು ಫೋಟೋ ಅಮೆರಿಕದ ನೀಲಿ ತಾರೆಯದ್ದಾಗಿದೆ. ಆಕೆಯ ಹೆಸರು ವೇನಸ್ ವೇಲೆನ್ಸಿಯಾ. ಆಕೆಯು ಕೂಡ ಇದು ತನ್ನದೇ ಫೋಟೋ ಮತ್ತು ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ನಕಲಿ ಫೋಟೋಗಳನ್ನು ಶೇರ್ ಮಾಡಿ ಸಮಂತಾರನ್ನು ಟ್ರೋಲ್ ಮಾಡಿದವರಿಗೆ ಅಭಿಮಾನಿಗಳು ಸರಿಯಾಗಿ ತಿರುಗೇಟು ನೀಡಿದ್ದಾರೆ. ಅಲ್ಲದೆ, ಸತ್ಯಕ್ಕೆ ಯಾವಾಗಲೂ ಜಯವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಟವಲ್ ಸುತ್ತಿಕೊಂಡಿರುವ ಫೋಟೋದಲ್ಲಿರುವುದು ಸಮಂತಾರೇ ಎಂದು ನಂಬುವಷ್ಟರಮಟ್ಟಿಗೆ ಎಡಿಟ್ ಮಾಡಲಾಗಿದೆ. ಏಕೆಂದರೆ, ಸಮಂತಾ ಹುಟ್ಟುಹಬ್ಬಕ್ಕೆ ಪ್ರಸಿದ್ಧ ಕ್ರೇಶಾ ಬಜಾಜ್ ಉಡುಗೊರೆ ನೀಡಿದ್ದ ನೆಕ್ಲೇಸ್ ಅನ್ನು ವೇನಸ್ ವೇಲೆನ್ಸಿಯಾ ಚಿತ್ರಕ್ಕೆ ಡಿಜಿಟಲ್ ಎಡಿಟಿಂಗ್ ಮೂಲಕ ಸೇರಿಸಲಾಗಿದೆ. ಹೀಗಾಗಿ ಅದನ್ನು ನೋಡಿದ ಅನೇಕರು ಸಮಂತಾ ಎಂದು ನಂಬಿದ್ದರು. ಆದರೆ, ಕೊನೆಗೂ ಸತ್ಯಾಂಶ ಬಯಲಾಗಿದೆ.
ಒರಿಜಿನಲ್ ಫೋಟೋ ಲಿಂಕ್: https://x.com/venusvalencia_/status/1784818077621952973
ಸಿನಿಮಾ ವಿಚಾರಕ್ಕೆ ಬಂದರೆ, ಸಮಂತಾ ಅವರು ಕೊನೆಯದಾಗಿ ತೆಲುಗಿನ ರೋಮ್ಯಾಂಟಿಕ್ ಚಿತ್ರ 'ಖುಷಿ' ನಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ತಮ್ಮ ಹೊಸ ಪ್ರೊಡಕ್ಷನ್ ಹೌಸ್ ಅನ್ನು ಸಮಂತಾ ಪ್ರಾರಂಭಿಸಿದ್ದಾರೆ. ತಮ್ಮ ನಿರ್ಮಾಣದ ಅಡಿಯಲ್ಲಿ ಒಂದು ಚಿತ್ರದಲ್ಲಿ ಸಮಂತಾ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)