ನಟಿ ಅಮೂಲ್ಯ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ, ಅಮೂಲ್ಯ ಅವರ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು, ಇತರ ಸೆಲೆಬ್ರಿಟಿಗಳು ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಇನ್ನು, ಇತ್ತೀಚೆಗೆ ನಟಿ ಅಮೂಲ್ಯ ಅವರು ತಮ್ಮ ಸ್ನೇಹಿತರ ಜತೆಗೆ ಒಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತಮ್ಮ ''ಮದರ್ ಟು ಬಿ'' ಪಾರ್ಟಿಯ ಸಮಯದಲ್ಲಿ ಸ್ನೇಹಿತರ ಜತೆ ಸೇರಿ ಒಂದಿಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಅಂದಹಾಗೆ, ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಅಮೂಲ್ಯರನ್ನು ಅವರ ಅನೇಕ ಗೆಳತಿಯರು ಭೇಟಿ ಮಾಡಿದ್ದಾರೆ. ಕಿರುತೆರೆಯ ನಗು ಮುಖದ ನಟಿ ವೈಷ್ಣವಿ ಗೌಡ ಸೇರಿದಂತೆ ಹಲವು ಸ್ನೇಹಿತರು ಅಮೂಲ್ಯ ಜೊತೆ ಒಂದಿಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಅವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಜಗದೀಶ್ ಅವರನ್ನು ನಟಿ ಅಮೂಲ್ಯ 2017ರಲ್ಲಿ ಮದುವೆಯಾದರು. ತಮ್ಮ ಜೀವನದ ಪ್ರತಿ ಸಂಭ್ರಮದ ಫೋಟೋ ಮತ್ತು ವಿಡಿಯೋಗಳನ್ನು ಈ ದಂಪತಿ ಅಭಿಮಾನಿಗಳೊಡನೆ ಹಂಚಿಕೊಳ್ಳುತ್ತಲೆ ಇರುತ್ತಾರೆ.