ಸೌತ್ ಸಿನಿಮಾ ಇಂಡಸ್ಟ್ರಿ ಬಗ್ಗೆ ಇಡೀ ದೇಶದಲ್ಲಿ ಒಳ್ಳೇ ಟಾಕ್ಸ್ ಇದೆ. ಇಲ್ಲಿನ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಮೀರಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ಬಾಹುಬಲಿ ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಯಾರೂ ಮಾಡದ ದಾಖಲೆ ಮಾಡಿತ್ತು. ಗಳಿಕೆಯಲ್ಲಿ ಬಾಹುಬಲಿಯ ಪಾಲೇ ಹೆಚ್ಚಿದೆ. ಇದೀಗ ಇದೇ ಟಾಲಿವುಡ್ನಿಂದ ಇನ್ನೊಂದು ಸುದ್ದಿ ಹೊರಬಂದಿದೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿಯೇ ಮೊದಲು.
ಇದನ್ನೂ ಓದಿ: ಟಾಲಿವುಡ್ ವಕೀಲ್ ಸಾಬ್ಗೆ ನಾಯಕಿ ಸಿಕ್ರು ನೋಡಿ
ಹೌದು, 2016ರಲ್ಲಿ ಅಲ್ಲು ಅರ್ಜುನ್ ನಾಯಕತ್ವದ ‘ಸರೈನೋಡು’ ಸಿನಿಮಾ ಬಿಡುಗಡೆಯಾಗಿತ್ತು. ಟಾಲಿವುಡ್ನಲ್ಲಿ ಸೂಪರ್ ಹಿಟ್ ಆಗಿದ್ದ ಆ ಸಿನಿಮಾ, ಬಿಡುಗಡೆಯಾದ ಬಳಿಕವೂ ದಾಖಲೆ ನಿರ್ಮಿಸುತ್ತಲೇ ಇತ್ತು. ಇದೀಗ ಯೂಟ್ಯೂಬ್ನಲ್ಲೂ ರೆಕಾರ್ಡ್ ಬ್ರೇಕ್ ಮಾಡಿದೆ. ಅಂದರೆ, ಈ ವರೆಗೂ 300 ಮಿಲಿಯನ್ ಬಾರಿ ಈ ಸಿನಿಮಾ ವೀಕ್ಷಣೆಗೊಳಪಟ್ಟಿದೆ. ಈ ಮೂಲಕ ಬೇರಾವ ಸಿನಿಮಾ ಮಾಡದ ಹೊಸ ದಾಖಲೆಯನ್ನು ಸರೈನೋಡು ಮಾಡಿದೆ. ಡಬ್ ಆದ ಮೊದಲ ಸಿನಿಮಾ ಈ ಮಟ್ಟದ ವೀಕ್ಷಣೆ ಕಂಡಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದ್ದು, ಈ ಗಡಿ ಮುಟ್ಟಿರುವುದಕ್ಕೆ ಚಿತ್ರತಂಡವೂ ಸಂಭ್ರಮದಲ್ಲಿದೆ.
ಇದನ್ನೂ ಓದಿ: ಕರೊನಾ ಹಾವಳಿ ನಡುವೆ ಫ್ಯಾಂಟಮ್ ಶುರು
ಬೊಯಾಪತಿ ಶ್ರೀನು ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ಶ್ರೀಕಾಂತ್, ಆದಿ ಪಿನಸೆಟ್ಟಿ, ಕ್ಯಾಥ್ರಿನ್ ಥೆರೆಸಾ, ರಾಕುಲ್ ಪ್ರೀತ್ ಸಿಂಗ್ ಮುಖ್ಯಭೂಮಿಕೆ ನಿಭಾಯಿಸಿದ್ದರು. ಸದ್ಯ ಸುಕುಮಾರ್ ನಿರ್ದೇಶನದಲ್ಲಿ ಪುಷ್ಪ ಸಿನಿಮಾ ಕೆಲಸಗಳು ಶುರುವಾಗಿದ್ದು, ಬಹುಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)