ಹೈದರಾಬಾದ್: ಹೈದರಾಬಾದ್ನಲ್ಲಿರುವ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಮನೆ ಸೌಂದರ್ಯ ಮತ್ತು ಸರಳತೆಗೆ ಪ್ರತಿರೂಪವಾಗಿದೆ. ವಿಶಿಷ್ಟವಾದ ಚೌಕಾಕಾರದಲ್ಲಿ ವಿನ್ಯಾಸಗೊಳಿಸಲಾದ ನಟನ ಮನೆ ವಾಸ್ತುಶಿಲ್ಪದ ಮೇರುಕೃತಿಯಾಗಿದೆ. ಹೀಗಾಗಿ, ನಟನ ಅಭಿಮಾನಿಗಳಿಗೆ ಅಲ್ಲು ಅವರ ಮನೆಯನ್ನು ನೋಡಲು ಬಹುದೊಡ್ಡ ಆಸೆಯಾಗಿರುತ್ತೆ. ಅದರಲ್ಲಿ, ಕೆಲವರಿಗೆ ನೋಡಲು ಸಾಧ್ಯವಾಗುತ್ತೆ, ಕೆಲವರಿಗೆ ಆಗುವುದಿಲ್ಲ. ಹೀಗಿರುವಾಗಲೇ, ಅರ್ಜುನ್ ಅವರ ಈ ಮನೆಯ ಬೆಲೆ ಎಷ್ಟು ಎಂಬುದು ಸದ್ಯ ಎಲ್ಲರಿಗೆ ತಿಳಿದುಬಂದಿದೆ. ಹಾಗಾಗಿ, ಅಲ್ಲು ಅವರ ಬಂಗಲೆಯ ಬೆಲೆಯ ಸುದ್ದಿಯೇ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಹೌದು, ನಟ ಅಲ್ಲು ಅರ್ಜುನ್ 2003 ರಲ್ಲಿ ಗಂಗೋತ್ರಿ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಅಂದಿನಿಂದ ಇಂದಿನವರೆಗೆ ಸಿನಿ ಪ್ರೇಕ್ಷಕರು ಮೆಚ್ಚಲೇ ಬೇಕಾದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಅರ್ಜುನ್. ಮೂರು ನಂದಿ ಪ್ರಶಸ್ತಿಗಳು ಮತ್ತು ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಅಲ್ಲು ಇತ್ತೀಚೆಗೆ ಬಿಡುಗಡೆಯಾದ ಅವರ 'ಪುಷ್ಪ' ಸಿನಿಮಾದೊಂದಿಗೆ ಇಡೀ ದೇಶದ ಗಮನ ಸೆಳೆದಿದ್ದಾರೆ. ಹೀಗಾಗಿ, ನಟ ಅಲ್ಲು ಅರ್ಜುನ್ ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ, ಅವರ ಮನೆಯ ಬೆಲೆ ಎಷ್ಟು ಇರಬಹುದು ಎಂದರೆ ಕೋಟಿ ಗಟ್ಟಲೆ ಇರಬಹುದು ಎಂದು ಎಲ್ಲರಿಗೂ ತಿಳಿದಿರುತ್ತೆ.
ಆದರೆ, ಅವರ ಮನೆಯ ಬೆಲೆ ಅಭಿಮಾನಿಗಳು ತಿಳಿದಿರುವಷ್ಟು, ಅಂದರೆ 30 ಅಥವಾ 40 ಕೋಟಿ ಅಲ್ಲ. ಬದಲಿಗೆ ಅಲ್ಲು ಅರ್ಜುನ್ ಮನೆಯ ಬೆಲೆ ಬರೋಬ್ಬರಿ 100 ಕೋಟಿ. ಹಾಗಾದರೆ, ಆ ಮನೆಯಲ್ಲಿ ಅಂತಹದ್ದು ಏನಿದೆ ಅಂತೀರಾ?. ನಟನ ಮನೆಯನ್ನು ಎಲ್ಲರೂ, ಅಲ್ಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ವಿಡಿಯೋಗಳಲ್ಲಿ ನೋಡಿರುತ್ತಾರೆ. ಆ ಫೋಟೋಗಳನ್ನು ಕಂಡವರು ನಟನ ಮನೆಯನ್ನು ಮನೆ ಎಂದು ಕರೆಯದೆ, ಬದಲಿಗೆ ಐಶಾರಾಮಿ ಬಂಗಲೆ ಎನ್ನಬಹುದು. ಅರ್ಜುನ್ ಅವರ ಈ ಮನೆ ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿದೆ. ಎರಡು ಎಕರೆಯ ವಿಶಾಲವಾದ ಜಾಗದಲ್ಲಿ ಅರ್ಜುನ್ ಅವರ ಬಂಗಲೆಯನ್ನು ಹೆಸರಾಂತ ವಾಸ್ತುಶಿಲ್ಪಿ ಅಮೀರ್ ಶರ್ಮಾ ಡಿಸೈನ್ ಮಾಡಲಾಗಿದ್ದು, ಅಲ್ಲು ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ.
ಸರಳವಾದ ಬಿಳಿ ಗೋಡೆಗಳು, ಗಿಡ-ಮರಗಳು, ದೊಡ್ಡ ಕೋಣೆಗಳು, ವಿಶಾಲವಾದ ಲಿವಿಂಗ್ ರೂಮ್, ಬಾರ್ ಏರಿಯಾ, ಮನರಂಜನಾ ಕೊಠಡಿ, ಜಿಮ್ ಏರಿಯಾ, ಕಾರು ಪಾರ್ಕಿಂಗ್, ಒಂದು ಮುದ್ದಾದ ಮಕ್ಕಳ ಕೊಠಡಿ ಕೂಡ ಇದೆ. ಮನೆಯ ಮೇಲೆ ಈಜುಕೊಳವೊಂದು ಸಹ ಇದೇ ಎನ್ನಲಾಗಿದೆ. ತಮ್ಮ ಮನೆಯ ಆಂತರಿಕ ವಿನ್ಯಾಸಗಳಿಗೆಯೇ ಬರೋಬ್ಬರಿ 30-35 ಕೋಟಿಯನ್ನು ನಟ ಖರ್ಚು ಮಾಡಿದ್ದಾರಂತೆ. ಬಂಗಲೆಯಲ್ಲಿ ಇರುವ ಮನರಂಜನಾ ಕೊಠಡಿಯ ವಸ್ತುಗಳಿಗೂ ಬರೋಬ್ಬರಿ 3-4 ಕೋಟಿ ಖರ್ಚಾಗಿದೆ. ಇಷ್ಟೆಲ್ಲಾ ಸೌಲಭ್ಯಗಳು ಇರುವ ಅಲ್ಲು ಮನೆಯ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತವೆ.