ಸಿನಿವಾಣಿ

‘ಜಿಂದಗಿ ನಾ ಮಿಲೇಗಿ ದೋಬಾರಾ 2’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ

ಈ ವರ್ಷ ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥೈವಾಡಿ’, ‘ಆರ್​ಆರ್​ಆರ್’ ಮತ್ತು ‘ಬ್ರಹ್ಮಾಸ್ತ್ರ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಮಧ್ಯೆ, ಆಲಿಯಾ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಅದೇ ‘ಜಿಂದಗಿ ನಾ ಮಿಲೇಗಿ ದೋಬಾರಾ 2’. ಹೆಸರು ಕೇಳಿದರೆ, ಇದು 10 ವರ್ಷಗಳ ಹಿಂದೆ ಬಂದಿದ್ದ ಹೃತಿಕ್ ರೋಶನ್, ಫರ್ಹಾನ್ ಅಖ್ತರ್ ಮತ್ತು ಅಭಯ್ ಡಿಯೋಲ್ ಅಭಿನಯದ ‘ಜಿಂದಗಿ ನಾ ಮಿಲೇಗಿ ದೋಬಾರಾ’ನ ಸೀಕ್ವೆಲ್ ಎಂದೆನಿಸಬಹುದು. ಸೀಕ್ವೆಲ್ ಎನ್ನುವುದಕ್ಕಿಂತ, ಅದರ ಫೀಮೇಲ್ ವರ್ಷನ್ ಎನ್ನಬಹುದು.

ಮೂವರು ಯುವಕರ ಸುತ್ತ ಸುತ್ತುವ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ಆದರೆ, ಭಾಗ ಎರಡರಲ್ಲಿ ಮೂವರು ಯುವತಿಯರ ಸುತ್ತ ಸುತ್ತುವ ಕಥೆಯನ್ನು ತೋರಿಸಲಾಗುತ್ತಿದ್ದು, ಈ ಪೈಕಿ ಚಿತ್ರದಲ್ಲಿ ನಟಿಸುವುದಕ್ಕೆ ಆಲಿಯಾ ಭಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇ ನ್ನು ಇಬ್ಬರು ಯುವತಿಯರ ಪಾತ್ರಕ್ಕೆ ಸೂಕ್ತ ನಾಯಕಿಯರ ಹುಡುಕಾಟ ನಡೆದಿದ್ದು, ಸ್ವತಃ ಫರ್ಹಾನ್ ಅಖ್ತರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.