ಮುಂಬೈ: ಬೇಸಿಗೆ ಕಾಲವನ್ನು ಬೀಚ್ಗೆ ತೆರಳಿ ಆನಂದಿಸುತ್ತಿರುವ ನಟಿ ಆಲಿಯಾ ಭಟ್(Alia Bhatt), ನೇರಳೆ ಬಣ್ಣದ ಬಿಕಿನಿಯಲ್ಲಿ(Bikini) ತೆಗೆಸಿಕೊಂಡ ಫೋಟೋವೊಂದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮುಂಬೈನ(Mumbai) ಕಡಲ ತೀರದಲ್ಲಿ ತಮ್ಮ ರಜೆ ದಿನಗಳನ್ನು ಕಳೆಯುತ್ತಿರುವ ನಟಿ ಆಲಿಯಾ, ಮೇಕಪ್ ಇಲ್ಲದ ಒಂದು ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಇದೀಗ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ.
ನೇರಳೆ ಬಣ್ಣದ ಬಿಕಿನಿಯಲ್ಲಿ ಕಂಗೊಳಿಸಿದ ಆಲಿಯಾ ಭಟ್, ನಗು ಮುಖದೊಂದಿಗೆ ಸೆಲ್ಫಿ(Selfie) ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಯೊಬ್ಬರು, "ಮೇಕಪ್ ಇಲ್ಲದೆ ಆಲಿಯಾ ಎಷ್ಟು ಚೆಂದ ಕಾಣುತ್ತಿದ್ದಾರೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿದ್ದು, "ನಿಮ್ಮ ತ್ವಚೆಯಂತೆಯೇ ನನ್ನ ತ್ವಚೆ ಕೂಡ ಇದೆ" ಎಂದು ಕಮೆಂಟ್(Comment) ಮಾಡಿದ್ದಾರೆ.
ಇದನ್ನೂ ಓದಿ: ಮರದ ಪೆಟ್ಟಿಗೆಯೊಳಗೆ ಪತ್ತೆಯಾಯ್ತು ಇಬ್ಬರು ಮಕ್ಕಳ ಶವ
ಸದ್ಯ ಆಲಿಯಾ ಭಟ್ ಅವರ ಈ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಶೇರ್ ಆಗುತ್ತಿದ್ದು, ಪಾಸಿಟಿವ್ ಕಮೆಂಟ್ಗಳನ್ನು ಪಡೆದುಕೊಳ್ಳುತ್ತಿದೆ.