ಅಕ್ಷಯ್ ಕುಮಾರ್ ನಾಯಕ್ವತದ ಸಾಲು ಸಾಲು ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಕರೊನಾ ನಡುವೆಯೂ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಡಿಸ್ನಿ ಹಾಟ್ಸ್ಟಾರ್ನಲ್ಲಿ ಲಕ್ಷ್ಮೀ ಬಾಂಬ್ ಸಿನಿಮಾ ರಿಲೀಸ್ ಆಗಲಿದೆ. ಈ ನಡುವೆ ರಕ್ಷಾ ಬಂಧನ್ ಹಬ್ಬದ ಪ್ರಯುಕ್ತ ಅಕ್ಷಯ್ ಹೊಸ ಸಿನಿಮಾ ಘೋಷಣೆ ಆಗಿದೆ. ಅಚ್ಚರಿ ಏನೆಂದರೆ ಸಿನಿಮಾ ಹೆಸರೂ ‘ರಕ್ಷಾ ಬಂಧನ್’.
ಹೌದು, ಈಗಾಗಲೇ ಬಾಲಿವುಡ್ನಲ್ಲಿ ಹಲವು ಯಶಸ್ವಿ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಆನಂದ್ ಎಲ್ ರಾಯ್, ಇದೀಗ ರಕ್ಷಾ ಬಂಧನ್ ಸಿನಿಮಾ ಆಯ್ದುಕೊಂಡು ಬಂದಿದ್ದಾರೆ. ಅಣ್ಣ ತಂಗಿಯ ಬಾಂಧವ್ಯವನ್ನೇ ಪ್ರಮುಖವಾಗಿಟ್ಟುಕೊಂಡು ಮೂಡಿಬರಲಿರುವ ಈ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.
ಇದನ್ನೂ ಓದಿ: ಟೊರಾಂಟೊ ಸಿನಿಮೋತ್ಸವಕ್ಕೆ ಹೊರಟ ಶ್ರದ್ಧಾ!
ನಾಲ್ವರು ತಂಗಿಯಂದಿರ ಮುದ್ದಿನ ಅಣ್ಣನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದು, ಭಾವುಕ ಕಥಾಹಂದರ ಹೊಂದಿದೆ. ಹಿಮಾಂಶು ಶರ್ಮಾ ಕತೆ ಬರೆದಿದ್ದು, 2021ರ ನವೆಂಬರ್ 5ಕ್ಕೆ ಸಿನಿಮಾ ತೆರೆಕಾಣಲಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಸೂರ್ಯವಂಶಿ ಸಿನಿಮಾ ತೆರೆಕಂಡಿರಬೇಕಿತ್ತು. ಚಿತ್ರಮಂದಿರದಲ್ಲಿಯೇ ಆ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರ ಇರುವುದರಿಂದ, ಸದ್ಯಕ್ಕೆ ಯಾವಾಗ ಬಿಡುಗಡೆ ಎಂಬುದಕ್ಕೆ ಉತ್ತರವಿಲ್ಲ. (ಏಜೆನ್ಸೀಸ್)