ಈಕೆಯ ಹೆಸರು ಗೊತ್ತಿಲ್ಲ. ಯಾವ ಊರು ಎಂಬುದು ಸ್ಪಷ್ಟವಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಈಕೆ ಜ್ಯೂನಿಯರ್ ಐಶ್ವರ್ಯಾ ರೈ ಎಂದೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅದಕ್ಕೆ ಕಾರಣ, ಈಕೆ ಐಶ್ವರ್ಯಾರಂತೆ ಕಾಣುವುದಷ್ಟೇ ಅಲ್ಲ, ಅದೇ ರೀತಿ ಅಭಿನಯವನ್ನು ಸಹ ಮಾಡುತ್ತಾರೆ.
ಹೌದು, ಇತ್ತೀಚಿನ ದಿನಗಳಲ್ಲಿ ಸೋಷಿಯಾ ಮೀಡಿಯಾದಲ್ಲಿ ಈ ಜ್ಯೂನಿಯರ್ ಐಶ್ವರ್ಯಾ ಅವರ ವಿಡಿಯೋ ಬಹಳ ಜನಪ್ರಿಯವಾಗುತ್ತಿರುವುದುಷ್ಟೇ, ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸುತ್ತಿದೆ. ಈ ವಿಡಿಯೋದಲ್ಲಿ, ಐಶ್ವರ್ಯಾ ತರಹವೇ ಕಾಣುವ ಈ ಯುವತಿ, ‘ಕಂಡುಕೊಂಡೇನ್ ಕಂಡುಕೊಂಡೇನ್’ ಚಿತ್ರದ ಒಂದು ಸಂಭಾಷಣೆಗೆ ಲಿಪ್ ಸಿಂಕ್ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದಲ್ಲಿ ಐಶ್ವರ್ಯಾ ರೈ ಅವರ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
ಈಗ ಅದೇ ಚಿತ್ರದ ಅದೇ ದೃಶ್ಯಕ್ಕೆ ಅವರ ಅಭಿಮಾನಿ, ಲಿಪ್ ಸಿಂಕ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಆಕೆಯ ಎಕ್ಸ್‌ಪ್ರೆಶನ್, ಕಣ್ಣುಗಳು ಮತ್ತು ಸಂಭಾಷಣೆ ಹೇಳುವ ಶೈಲಿಗೆ ನೆಟ್ಟಿಗರು ಬಹುಪರಾಕ್ ಹೇಳುತ್ತಿದ್ದಾರೆ.
ಇದನ್ನೂ ಓದಿ: ಟಿಕ್‌ಟಾಕ್‌ನಲ್ಲಿ ನಕಲಿ ಕರಿಷ್ಮಾ ಕಪೂರ್ ಹವಾ!
ಇದಕ್ಕೂ ಮುನ್ನ, ಕೆಲವು ದಿನಗಳ ಹಿಂದೆ ಕರೀಷ್ಮಾ ಕಪೂರ್ ಅವರ ತದ್ರೂಪಿ ಹೀನಾ ಖಾನ್ ಎಂಬ ಯುವತಿ, ಕರೀಷ್ಮಾ ಅಭಿನಯದ ದೃಶ್ಯಗಳಿಗೆ ಮತ್ತು ಹಾಡುಗಳಿಗೆ ಲಿಪ್‌ಸಿಂಕ್ ಮಾಡಿ ಶಹಬ್ಭಾಸ್‌ಗಿರಿ ಗಿಟ್ಟಿಸಿಕೊಂಡಿದ್ದರು. ಹೀನಾಗೆ ಟಿಕ್‌ಟಾಕ್‌ನಲ್ಲಿ 2.4 ಮಿಲಿಯನ್ ಹಿಂಬಾಲಕರು ಇರುವುದು ಇನ್ನೊಂದು ವಿಶೇಷ.