ಬೆಂಗಳೂರು: ಬಹುಭಾಷಾ ನಟಿ ಶ್ರದ್ಧಾ ಶ್ರೀನಾಥ್ ಇದೀಗ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮಿಳಿನ ಮಾರಾ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಗೆ ಸಿದ್ಧವಾದರೆ, ತೆಲುಗಿನಲ್ಲಿ ಹೊಸ ಪ್ರಾಜೆಕ್ಟ್ವೊಂದನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಶೀರ್ಷಿಕೆಯೂ ಅನಾವರಣಗೊಂಡಿದ್ದು, ‘ನರುಡಿ ಬ್ರತುಕೆ ನಟನಾ’ ಎಂದಿಡಲಾಗಿದೆ.
ಇದನ್ನೂ ಓದಿ: ಅನ್ಲಾಕ್ ಬಳಿಕ ಈಗ ಸಿನಿಮಾಗಳ ಮರುಬಿಡುಗಡೆ ಪರ್ವ!
ವಿಶೇಷ ಏನೆಂದರೆ, ಈ ಹಿಂದೆ ‘ಕೃಷ್ಣ ಆ್ಯಂಡ್ ಹೀಸ್ ಲೀಲಾ’ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಆ ಚಿತ್ರದಲ್ಲಿ ಶ್ರದ್ಧಾಗೆ ಸಿದ್ದು ಜೊನ್ನಲಗದ್ದ ನಾಯಕನಾಗಿ ನಟಿಸಿದ್ದರು. ಇದೀಗ ‘ನರುಡಿ ಬ್ರತುಕೆ ನಟನಾ’ ಚಿತ್ರದಲ್ಲಿಯೂ ಈ ಜೋಡಿ ಮತ್ತೆ ಒಂದಾಗುತ್ತಿದೆ.
ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಈ ಸಿನಿಮಾಕ್ಕೆ ವಿಮಲ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ನಡೆಯುತ್ತಿದ್ದು, ನವೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣಕ್ಕೆ ತಂಡ ಚಾಲನೆ ನೀಡಲಿದೆ. ಸೂರ್ಯದೇವರ ನಾಗ ವಂಶಿ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.