ಕೇರಳ: ಆದಿಪುರುಷ್(Adipurush) ಚಿತ್ರ ಹಲವು ವಿವಾದಗಳ ನಡುವೆ ಸಿಲುಕಿದರೂ ಕೂಡ ಪ್ರಾರಂಭದಲ್ಲಿ ಬಾಕ್ಸ್ ಆಫೀಸ್‌ನಲ್ಲಿ(Box Office) ಉತ್ತಮ ಗಳಿಕೆಯನ್ನು ಕಂಡಿತು. ಆದ್ರೆ, ಕೇರಳದಲ್ಲಿ(Kerala) ಮಾತ್ರ ಈ ಚಿತ್ರ ಅಂದಾಜಿಸಿದ ಗಳಿಕೆಯನ್ನು ತಲುಪಿಲ್ಲ ಎಂಬುದು ಇತ್ತೀಚಿನ ವರದಿ ಮೂಲಕ ತಿಳಿದುಬಂದಿದೆ.
ಚಿತ್ರ ಬಿಡುಗಡೆಗೊಂಡ ಮೊದಲ ಮೂರು ದಿನಗಳಲ್ಲಿ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದರಿಂದಾಗಿ ಆದಿಪುರುಷ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ವೇಗವನ್ನು ಕಾಣಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ, ಈ ಚಿತ್ರವು ಅಂದುಕೊಂಡಂತೆ ಕಲೆಕ್ಷನ್ ಮಾಡಿಲ್ಲ ಎಂದು ಹೇಳಲಾಗಿದೆ.
ಕಳೆದ 5 ದಿನಗಳಲ್ಲಿ ಆದಿಪುರುಷ್ ಚಿತ್ರ ಕೇರಳದ ಬಾಕ್ಸ್ ಆಫೀಸ್‌ನಲ್ಲಿ ಕೇವಲ 1.7 ಕೋಟಿ ರೂ. ಗಳಿಕೆಯನ್ನು ಮಾತ್ರ ಕಂಡಿದೆ. ಈ ಮೂಲಕ ನಿರೀಕ್ಷಿಸಿದಂತೆ ಚಿತ್ರ ಕಲೆಕ್ಷನ್ ಮಾಡದೆ ಇರುವುದು ಚಿತ್ರತಂಡಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ಆದಿಪುರುಷ್ ಚಿತ್ರ ಮಹಾಕಾವ್ಯ ರಾಮಾಯಣವನ್ನು(Ramayana) ಆಧರಿಸಿ ಚಿತ್ರಿಸಲಾಗಿದೆ. ಸಿನಿಮಾದಲ್ಲಿ ನಟ ಪ್ರಭಾಸ್(Prabhas), ಕೃತಿ ಸನೋನ್, ಸೈಫ್ ಅಲಿ ಖಾನ್ ಸೇರಿದಂತೆ ಮುಂತಾದ ನಟರು ಪ್ರಮುಖ ಪಾತ್ರಗಳ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಓಂ ರಾವುತ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ,(ಏಜೆನ್ಸೀಸ್).