ಸಿನಿವಾಣಿ

ಅಭಿಮಾನಿಗಳ ಆತಂಕಕ್ಕೆ ಕಾರಣವಾದ ನಟಿ ಶ್ರುತಿ ಹಾಸನ್! ಇನ್​ಸ್ಟಾಗ್ರಾಂ ಪೋಸ್ಟ್ ವೈರಲ್...

Vijayavani
ಕರೊನಾ ಮೂರನೇ ಅಲೆ ಕಡಿಮೆ ಆದರೂ, ಸಂಪೂರ್ಣವಾಗಿ ತೊಲಗಿಲ್ಲ. ಇನ್ನು, ಕೆಲವರು ಕರೊನಾ ವೈರಸ್​ಗೆ ಪಾಸಿಟಿವ್ ಆಗುತ್ತಿದ್ದಾರೆ. ಇದೀಗ, ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಕೂಡಾ ಕರೊನಾ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಇನ್ನು, ನಟಿಗೆ ಕರೊನಾ ಪಾಸಿಟಿವ್ ಎಂದು ತಿಳಿದು ಅವರ ಅಭಿಮಾನಿಗಳು ಹೆದರಿದ್ದಾರೆ. ಆದರೆ, ಶ್ರುತಿಗೆ ಯಾವುದೇ ತೊಂದರೆ ಇಲ್ಲ. ನಟಿ ಶ್ರುತಿ, ‘'ಎಲ್ಲರಿಗೂ ನಮಸ್ಕಾರ. ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ ನಂತರವೂ ಕರೊನಾ ಪಾಸಿಟಿವ್ ಆಗಿದ್ದೇನೆ.
ನಾನು ಶೀಘ್ರದಲ್ಲೇ ಗುಣಮುಖಳಾಗುತ್ತೇನೆ. ಧನ್ಯವಾದಗಳು.'’ ಎಂಬ ಸಂದೇಶವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹೀಗಿದ್ದರೂ, ನಟಿಯ ಈ ಪೋಸ್ಟ್ ಮೇಲೆ ನೂರಾರು ಕಮೆಂಟ್​ಗಳು ಇವೆ. ಹೌದು, ಹಲವು ಸೆಲೆಬ್ರಿಟಿಗಳು ಸೇರಿ ನಟಿಯ ಅಭಿಮಾನಿಗಳು ಕೂಡಾ ಶ್ರುತಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಮತ್ತೊಂದೆಡೆ, ಶ್ರುತಿ ನಟನೆಯ ‘ಬೆಸ್ಟ್​ಸೆಲ್ಲರ್​’ ವೆಬ್​ ಸರಣಿ ಫೆಬ್ರವರಿ 18ರಂದು ರಿಲೀಸ್​ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಇನ್ನು, ಡಾರ್ಲಿಂಗ್ ಪ್ರಭಾಸ್​ ಅಭಿನಯದ, ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್’ ಚಿತ್ರದಲ್ಲಿ ಶ್ರುತಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.