ಸಿನಿವಾಣಿ

ಖಂಡಿತವಾಗಿ ನಿಮಗಿಂತ ದೊಡ್ಡದು! ಅಶ್ಲೀಲ ಪ್ರಶ್ನೆ ಕೇಳಿದ ನೆಟ್ಟಿಗನಿಗೆ ಖಡಕ್​ ಉತ್ತರ ಕೊಟ್ಟ ನಟಿ ಶಾಲೂ

ಚೆನ್ನೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ಯಾವುದೇ ಕಾಮೆಂಟ್​ ಅಥವಾ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಕಾಲಿವುಡ್​ನ ನಟಿಯೊಬ್ಬರು ನೆಟ್ಟಿಗನೊಬ್ಬ ಕೇಳಿದ ವೈಯಕ್ತಿಕ ಪ್ರಶ್ನೆಗೆ ಖಡಕ್​ ಉತ್ತರವನ್ನು ನೀಡಿದ್ದಾರೆ.

ಜಾಲತಾಣದಲ್ಲೇ ಹೆಚ್ಚು ಸದ್ದು 

ತಮಿಳಿನ ಸೂಪರ್​ ಹಿಟ್​ "ವರೂತಪದತ ವಾಲಿಬರ್ ಸಂಗಮ" ಸಿನಿಮಾದ ನಟಿಸಿದ ಬಳಿಕ ಖ್ಯಾತಿಯನ್ನು ಹೆಚ್ಚಿಕೊಂಡಿರುವ ನಟಿ ಶಾಲೂ ಶಾಮು, ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೇಗಡಿ, ತಮಿಳುಕು ನುಮಾ ಉತ್ಸುತ್​, ಮಿಸ್ಟರ್​ ಲೋಕಲ್​ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಶಾಲೂ ಹೆಚ್ಚು ಸದ್ದು ಮಾಡುತ್ತಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಶಾಲೂ, ಇನ್​ಸ್ಟಾಗ್ರಾಂನಲ್ಲಿ 8 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಯಾವಾಗಲೂ ತಮ್ಮ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿ ಏರಿಸುತ್ತಿರುತ್ತಾರೆ. ಅವರ ಇನ್​ಸ್ಟಾಗ್ರಾಂ ಪೂರ್ತಿ ಗ್ಲಾಮರಸ್​ ಫೋಟೋಗಳೇ ತುಂಬಿ ಹೋಗಿವೆ.

ನಿಮಗಿಂತಲೂ ದೊಡ್ಡದು! 

ಇತ್ತೀಚೆಗೆ ಶಾಲೂ ಅವರು ತಮ್ಮ ಫಾಲೋವರ್ಸ್​ ಜತೆ ಪ್ರಶ್ನೋತ್ತರ ಸಂವಾದ ನಡೆಸಿದ್ದರು. ಈ ವೇಳೆ ನೆಟ್ಟಿಗನೊಬ್ಬ ಅಶ್ಲೀಲ ಪ್ರಶ್ನೆಯನ್ನು ಕೇಳಿದ್ದಾನೆ. ಆದರೂ ಈ ಪ್ರಶ್ನೆಗೆ ಮುಜುಗರಪಟ್ಟುಕೊಳ್ಳದ ಶಾಲೂ ಖಡಕ್​ ಉತ್ತರ ಮೂಲಕ ನೆಟ್ಟಿಗನಿಗೆ ತಿರುಗೇಟು ನೀಡಿದ್ದಾರೆ. "ನಿಮ್ಮ ಸ್ತನಗಳ ಗಾತ್ರ ಎಷ್ಟು" ಎಂದು ನೆಟ್ಟಿಗ ಪ್ರಶ್ನೆ ಮಾಡಿದ್ದ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಲೂ ಖಂಡಿತವಾಗಿಯೂ ನಿಮಗಿಂತಲೂ ದೊಡ್ಡದು ಎಂದಿದ್ದಾರೆ.

ಪ್ರಶ್ನೆಯ ಸ್ಕ್ರೀನ್​ಶಾಟ್​ ಅನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದು, ಇದೀಗ ಭಾರೀ ವೈರಲ್​ ಆಗಿದೆ. ಅಶ್ಲೀಲ ಪ್ರಶ್ನೆ ಕೇಳಿದ ನೆಟ್ಟಿಗನಿಗೆ ಉಳಿದ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)