ಸಿನಿಮಾ

ನಾನು ಯಾವ ಕಾಂಡೋಮ್ ಬಳಸುತ್ತೇನೆಂದು ನೀವು ಕೇಳ್ತೀರಾ? ನೆಟ್ಟಿಗನಿಗೆ ನಟಿಯ ತಿರುಗೇಟು

ಚೆನ್ನೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ಯಾವುದೇ ಕಾಮೆಂಟ್​ ಅಥವಾ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಕಾಲಿವುಡ್​ನ ನಟಿಯೊಬ್ಬರು ನೆಟ್ಟಿಗನೊಬ್ಬ ಕೇಳಿದ ವೈಯಕ್ತಿಕ ಪ್ರಶ್ನೆಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.

ತಮಿಳು ಕಿರುತೆರೆ ಲೋಕದ ಜನಪ್ರಿಯ ನಟಿಯಾಗಿರುವ ಫಾತಿಮಾ ಬಾಬು, ಇತ್ತೀಚೆಗೆ ತನ್ನ ಫಾಲೋವರ್ಸ್​ ಜತೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ನಡೆಸಿದರು. ಈ ವೇಳೆ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಯ ಸ್ಕ್ರೀನ್​ ಶಾಟ್​ಗಳನ್ನು ನಟಿ ಫಾತಿಮಾ ತಮ್ಮ ಜಾಲತಾಣ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಂದಹಾಗೆ ಫಾತಿಮಾ ಅವರು ಬಿಗ್ ಬಾಸ್​ನ ಮಾಜಿ ಸ್ಪರ್ಧಿಯೂ ಹೌದು.

ಇದನ್ನೂ ಓದಿ: ಮಸೀದಿಯಿಂದ ಶ್ರೀಕೃಷ್ಣನ ಮೂರ್ತಿ ಅಗೆಯಲು ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ನ್ಯಾಯಾಲಯ; ವಕ್ಫ್​ ಬೋರ್ಡ್​ಗೆ ನೋಟಿಸ್

ಫಾತಿಮಾ ಬಾಬು ಅವರು ದೂರದರ್ಶನದಲ್ಲಿ ನ್ಯೂಸ್ ರೀಡರ್ ಆಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ನಟನೆಯಲ್ಲೂ ತಮ್ಮ ಛಾಪು ಮೂಡಿಸಿರುವ ಫಾತಿಮಾ, ತಮಿಳು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ತುಂಬಾ ಸಕ್ರಿಯರಾಗಿರುತ್ತಾರೆ. ಆಗಾಗ ಅಭಿಮಾನಿಗಳ ಜತೆ ಸಂವಾದದಲ್ಲಿ ತೊಡಗುತ್ತಿರುತ್ತಾರೆ.

ಮಕ್ಕಳಿಗೇಕೆ ಮುಸ್ಲಿಂ ಹೆಸರುಗಳನ್ನು ಇಟ್ಟಿದ್ದೀರಿ?

ಇತ್ತೀಚೆಗೆ ತಮ್ಮ ಫಾಲೋವರ್ಸ್​ ಜತೆ ಫಾತಿಮಾ ಅವರು ಫೇಸ್​ಬುಕ್​ನಲ್ಲಿ ಸಂವಾದ ನಡೆಸಿದರು. ಮುಸ್ಲಿಂ ಆಗಿದ್ದುಕೊಂಡು ನೀವು ಹಿಂದು ವ್ಯಕ್ತಿಯನ್ನು ಮದುವೆಯಾಗಿದ್ದರೂ ನಿಮ್ಮ ಮಕ್ಕಳಿಗೇಕೆ ಮುಸ್ಲಿಂ ಹೆಸರುಗಳನ್ನು ಇಟ್ಟಿದ್ದೀರಿ ಎಂದು ನೆಟ್ಟಿಗನೊಬ್ಬ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಫಾತಿಮಾ, ನನ್ನ ಮಕ್ಕಳಿಗೆ ಅವರ ಹೆಸರಿನೊಂದಿಗೆ ಯಾವುದೇ ಸಮಸ್ಯೆ ಇಲ್ಲ. ನಿಮಗೇನಾದರೂ ಇದರಿಂದ ತೊಂದರೆಯೇ? ಈ ವಿಚಾರದ ಬಗ್ಗೆ ನೀವೇಕೆ ಚಿಂತಿಸುತ್ತೀರಿ ಎಂದು ಉತ್ತರ ನೀಡಿದರು.

ನಿಮಗೇಕೆ ಇದು ದೊಡ್ಡ ವಿಷಯ?

ಇದಕ್ಕೆ ಮರು ಪ್ರತಿಕ್ರಿಯೆ ನೀಡಿದ ನೆಟ್ಟಿಗ, ನನಗೆ ಕೇಳಬೇಕು ಅಂತ ಅನಿಸಿದ್ದರಿಂದ ನಾನು ಈ ಪ್ರಶ್ನೆಯನ್ನು ಕೇಳಿದೆ ಎಂದನು. ಅದಕ್ಕೆ ಉತ್ತರಿಸಿದ ಫಾತಿಮಾ ಬಾಬು, “ನನ್ನ ನಿಕಾ ಹಿಂದು ವ್ಯಕ್ತಿಯ ಜತೆ ಮಸೀದಿಯಲ್ಲಿ ನಡೆಯಿತು ಮತ್ತು ನನ್ನ ಮಕ್ಕಳಿಗೆ ಹಿಂದೂ ಹೆಸರುಗಳನ್ನೂ ಇಡಲಾಗಿದೆ. ಆದರೆ, ಮುಸ್ಲಿಂ ಹೆಸರು ನಿಮಗೆ ಏಕೆ ದೊಡ್ಡ ವಿಷಯವಾಗಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪತ್ನಿಯರ ಬೆತ್ತಲೆ ಫೋಟೋ ಶೇರ್​ ಮಾಡುವ ಆ್ಯಪ್​: ಸಿಕ್ಕಿಬಿದ್ದ ಆರೋಪಿಯಿಂದ ಆ್ಯಪ್​ ಕರಾಳತೆ ಬಯಲು

ಕಾಂಡೋಮ್ ಬಗ್ಗೆ ಕೇಳುತ್ತೀರಾ?

ಇದಕ್ಕೆ ಮತ್ತೆ ಮರು ಉತ್ತರ ನೀಡಿದ ನೆಟ್ಟಿಗ ಇದು ಸಾರ್ವಜನಿಕ ವೇದಿಕೆ. ನಾನು ಅನುಚಿತವಾದ ಏನನ್ನೂ ಕೇಳಲಿಲ್ಲ ಎಂದನು. ಬಳಿಕ ಫಾತಿಮಾ ಅವರು ಮಾತನಾಡಿ, ಯಾವ ಸಾರ್ವಜನಿಕ ವೇದಿಕೆ? ಇದು ಸಾರ್ವಜನಿಕ ವೇದಿಕೆ ಎಂಬ ಕಾರಣಕ್ಕೆ ನಾನು ಯಾವ ಕಾಂಡೋಮ್ ಬಳಸುತ್ತೇನೆ ಎಂದು ಕೇಳುತ್ತೀರಾ? ಎಂದರು. ಯಾವುದೇ ಕಾರಣಕ್ಕೂ ವೈಯಕ್ತಿಕ ವಿಚಾರಗಳು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಯ ವಿಷಯವಾಗಬಾರದು ಎಂದು ನೆಟ್ಟಿಗನಿಗೆ ಫಾತಿಮಾ ಬಾಬು ಬುದ್ಧಿಮಾತು ಹೇಳಿದರು. (ಏಜೆನ್ಸೀಸ್​)

ಪತ್ನಿಯರ ಬೆತ್ತಲೆ ಫೋಟೋ ಶೇರ್​ ಮಾಡುವ ಆ್ಯಪ್​: ಸಿಕ್ಕಿಬಿದ್ದ ಆರೋಪಿಯಿಂದ ಆ್ಯಪ್​ ಕರಾಳತೆ ಬಯಲು

ಅಮೆಜಾನ್ ಭಾರತದಲ್ಲಿ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಿದೆ

ಕಾಂಗ್ರೆಸ್​ ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ: ಜಿ. ಪರಮೇಶ್ವರ್​ ಹೇಳಿಕೆ

Latest Posts

ಲೈಫ್‌ಸ್ಟೈಲ್