ಸಿನಿವಾಣಿ

ಅತ್ಯಾಚಾರದ ಬೆದರಿಕೆ ಹಾಕಿದ್ದವನನ್ನು ಹುಡುಕಿಕೊಡಿ ಎಂದು ಪೊಲೀಸರ ಮೊರೆ ಹೋದ ನಟಿ

ಮುಂಬೈ: ಕಾರಿನಲ್ಲಿ ತನ್ನ ಮಗಳ ಜತೆ ಇದ್ದಾಗ ಅಪರಿಚಿತ ವ್ಯಕ್ತಿಯೋರ್ವ ನಿಂದಿಸಿದ್ದಲ್ಲದೇ, ಅತ್ಯಾಚಾರದ ಬೆದರಿಕೆಯೊಡ್ಡಿದ್ದಾನೆ ಎಂದು ಹಿಂದಿ ಕಿರುತೆರೆ ನಟಿ ಮಾಹಿ ತನ್ನ ಜತೆ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.

ತಾನು ಕಾರಿನಲ್ಲಿದ್ದಾಗಲೇ ಎಲ್ಲಿಂದಲೋ ಬಂದ ವ್ಯಕ್ತಿ ಕಾರಿನ ಡೋರನ್ನು ಬಡಿದು, ನಿನ್ನ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಸಿದ ಆ ವೇಳೆ ನಾನು ತುಂಬಾ ಭಯಗೊಂಡಿದ್ದೆ ಎಂದಿದ್ದಾರೆ. ಇನ್ನು ಅವನ ಕಾರಿನ ನಂಬರ್​ ವಿಡಿಯೋ ಮಾಡಿಕೊಂಡಿರುವ ನಟಿ ಸದ್ಯ ಮುಂಬೈ ಪೊಲೀಸರಿಗೆ ಟ್ವೀಟ್​ ಮಾಡಿ ನೆರವು ಕೇಳಿದ್ದಾರೆ.

ಕಾರಿನಿಂದ ಇಳಿದ ವ್ಯಕ್ತಿ ಲೈಸೆನ್ಸ್ ತೋರಿಸುವಂತೆ ಹೇಳಿದ ಅಲ್ಲದೇ ರೇಪ್​ ಮಾಡುತ್ತೇನೆ ಎಂದ ಆ ವೇಳೆ ಅಲ್ಲೇ ಇದ್ದ ಆಕೆಯ ಪತ್ನಿಯೂ ತನ್ನ ವಿರುದ್ಧ ರೇಗಿದಳು. ಇವರನ್ನು ಹುಡುಕಿಕೊಡಿ ಹಾಗೂ ಕ್ರಮ ಕೈಗೊಳ್ಳಬೇಕೆಂದು ನಟಿ ಟ್ವೀಟ್​ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಹೇಳಿದ್ದಾರೆ. ಇನ್ನು ಟ್ವಿಟಿಗರು ಕೂಡ ಈ ಘಟನೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ನೀವು ಸಹಿಸಿಕೊಳ್ಳಬೇಡಿ ತಕ್ಷಣ ದೂರು ನೀಡಿ ಎಂದು ಸಲಹೆ ನೀಡಿದ್ದಾರೆ.