ಸಿನಿವಾಣಿ

ನಟಿ ಸಂಯುಕ್ತಾಗೆ ಪೆಟ್ಟು!; ಕಾಲು ಉಳುಕಿಸಿಕೊಂಡ ಕಿರಿಕ್ ಹುಡುಗಿ

‘ಕಿರಿಕ್ ಪಾರ್ಟಿ’ ನಟಿ ಸಂಯುಕ್ತಾ ಹೆಗ್ಡೆ ಚಿತ್ರೀಕರಣದ ವೇಳೆ ಕಾಲು ಉಳುಕಿಸಿಕೊಂಡಿದ್ದಾರೆ. ಬುಧವಾರ ಕಂಠೀರವಾ ಸ್ಟುಡಿಯೋದಲ್ಲಿ ಸೆಟ್​ನಲ್ಲಿ ‘ಕ್ರೀಮ್ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿತ್ತು. ಆಗ ಸಾಹಸ ನಿರ್ದೇಶಕ ಪ್ರಭು, ಸಂಯುಕ್ತಾಗೆ ಡ್ಯೂಪ್ ಬಳಸಲು ಒತ್ತಾಯಿಸಿದರೂ, ಅವರು ಒಪ್ಪಿರಲಿಲ್ಲ. ಬದಲಾಗಿ ತಾವೇ ಖುದ್ದಾಗಿ ಸ್ಟಂಟ್ ಮಾಡಲು ಮುಂದಾಗಿದ್ದು, ಸಾಹಸ ಕಲಾವಿದರ ಜತೆ ಫೈಟ್ ಮಾಡುವ ವೇಳೆ ಜಾರಿ ಬಿದ್ದು ಕಾಲು ಉಳುಕಿಸಿಕೊಂಡಿದ್ದಾರೆ. ತಕ್ಷಣ ಅವರನ್ನು ಕಣ್ವ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸಂಯುಕ್ತಾ ಅವರ ಕಾಲಿಗೆ ಪೆಟ್ಟಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರಿಗೆ 15 ದಿನಗಳ ವಿಶ್ರಾಂತಿ ಪಡೆಯಲು ತಿಳಿಸಿದ್ದಾರೆ. ಇನ್ನು ಮೂರು ದಿನಗಳಲ್ಲಿ ಚಿತ್ರೀಕರಣವೇ ಮುಗಿದುಹೋಗುತ್ತಿತ್ತು, ಅಷ್ಟರಲ್ಲಿ ಹೀಗಾಯಿತು’ ಎಂದು ಘಟನೆ ಸಂಬಂಧ ನಿರ್ವಪಕ ದೇವೇಂದ್ರ ವಿಜಯವಾಣಿಗೆ ಮಾಹಿತಿ ನೀಡಿದರು. ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ‘ಕ್ರೀಮ್ ಮೂಡಿಬರುತ್ತಿದ್ದು, ಈಗಾಗಲೇ ಶೇಕಡಾ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.