ಬೆಂಗಳೂರು: ದಕ್ಷಿಣ ಭಾರತದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ನ್ಯಾಷನಲ್ ಕ್ರಷ್ ಎಂದೇ ಕರೆಸಿಕೊಳ್ಳುವ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ನತ್ತ ಮುಖ ಮಾಡಿರುವುದು ಗೊತ್ತಿರುವ ವಿಚಾರವೇ. ಇತ್ತೀಚೆಗಷ್ಟೇ ಬಾಲಿವುಡ್ನ ಟಾಪ್ ರ‍್ಯಾಪರ್ ಬಾದ್ಷಾ ಅವರ ಹಾಡಿನಲ್ಲಿ ರಶ್ಮಿಕಾ ಹೆಜ್ಜೆ ಹಾಕಿ ಬಂದಿರುವುದೂ ದೊಡ್ಡ ಸುದ್ದಿಯಾಗಿತ್ತು. ಇದೀಗ ಅದೇ ಹಾಡಿನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ.
ಹೌದು, ಇಲ್ಲಿಯವರೆಗೂ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರಶ್ಮಿಕಾ ಮೊದಲ ಬಾರಿಗೆ ಮ್ಯೂಸಿಕ್ ಜಗತ್ತಿಗೆ ಪದಾರ್ಪಣೆ ಮಾಡಿದ್ದಾರೆ. ಟಾಪ್ ಟಕ್ಕರ್ ಶೀರ್ಷಿಕೆಯ ಹಾಡಿಗೆ ಬಾದ್ಷಾ ಧ್ವನಿ ನೀಡಿದ್ದು, ಅದರಲ್ಲಿ ರಶ್ಮಿಕಾ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ಇನ್ನೇನು ಶೀಘ್ರದಲ್ಲಿ ಆ ಹಾಡು ಬಿಡುಗಡೆ ಆಗಲಿದೆ ಎಂದು ಸ್ವತಃ ಆಲ್ಬಂ ತಂಡವೇ ಹೇಳಿಕೊಂಡಿದೆ.
ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಹಾಡಿಗೆ ಬಾಲಿವುಡ್ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಬಂಡವಾಳ ಹಾಕಿದೆ. ಚಂಡೀಗಢದಲ್ಲಿ ಹಾಡಿನ ಸಲುವಾಗಿಯೇ ಬೃಹತ್ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಇನ್ನು ರ‍್ಯಾಪರ್ ಬಾದ್ಷಾ ಈಗಾಗಲೇ ಬಾಲಿವುಡ್ನ ಆಲಿಯಾ ಭಟ್, ಸೋನಮ್ ಕಪೂರ್, ಜಾಕ್ಲೀನ್ ಫರ್ನಾಂಡೀಸ್, ನೋರಾ ಫತೇಹಿ, ವರುಣ್ ಧವನ್ ಸೇರಿ ಹಲವು ಸ್ಟಾರ್ಗಳ ಜತೆಗೆ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್)