ಸಿನಿವಾಣಿ

ಒಟಿಟಿಯತ್ತ ನಯನತಾರಾ; ಬಾಹುಬಲಿ - ಬಿಫೋರ್ ದಿ ಬಿಗಿನಿಂಗ್

Webdesk - Ravikanth

ಟಾಲಿವುಡ್ ಹಾಗೂ ಕಾಲಿವುಡ್​ನ ಜನಪ್ರಿಯ ನಟಿಯರೆಲ್ಲ ಇದೀಗ ಒಟಿಟಿಯತ್ತ ಮುಖ ಮಾಡುತ್ತಿದ್ದಾರೆ. ಸಮಂತಾ, ತಮನ್ನಾ, ಅಮಲಾ ಪೌಲ್ ನಂತರ ಇದೀಗ ನಯನತಾರಾ ಸಹ ಒಟಿಟಿಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಬಹಳ ಕೇಳಿಬರುತ್ತಿದೆ. ನೆಟ್​ಫ್ಲಿಕ್ಸ್​ಗಾಗಿ ‘ಬಾಹುಬಲಿ - ಬಿಫೋರ್ ದಿ ಬಿಗಿನಿಂಗ್’ ಎಂಬ ವೆಬ್​ಸರಣಿ ರೂಪುಗೊಳ್ಳುತ್ತಿರುವ ವಿಷಯವನ್ನು ಕೇಳಿರಬಹುದು. ಈ ವೆಬ್​ಸರಣಿಯಲ್ಲಿ ನಯನತಾರಾ ಒಂದು ಪ್ರಮುಖ ಪಾತ್ರ ವಹಿಸುತ್ತಿದ್ದಾರಂತೆ. ‘ಬಾಹುಬಲಿ - ಬಿಫೋರ್ ದಿ ಬಿಗಿನಿಂಗ್’ ಎಂಬ ಹೆಸರೇ ಹೇಳುವಂತೆ ‘ಬಾಹುಬಲಿ’ ಚಿತ್ರದ ಕಥೆಗೂ ಮುನ್ನ ನಡೆಯಿತೆನ್ನಲಾದ ಕಥೆಯ ಸುತ್ತ ಈ ವೆಬ್​ಸರಣಿ ಸುತ್ತುತ್ತದೆ.

ಅಂದರೆ, ಇಲ್ಲಿ ಪ್ರಮುಖವಾಗಿ ಮಾಹಿಷ್ಮತಿ ಸಾಮ್ರಾಜ್ಯ ಮತ್ತು ಶಿವಗಾಮಿಯ ಕುರಿತು ಬೆಳಕು ಚೆಲ್ಲಲಾಗುತ್ತದಂತೆ. ಶಿವಗಾಮಿ ಎನ್ನುತ್ತಿದ್ದಂತೆ, ಆ ಪಾತ್ರವನ್ನು ನಯನತಾರಾ ನಿರ್ವಹಿಸಬಹುದು ಎಂದನಿಸಬಹುದು. ಹಾಗೇನಿಲ್ಲ. ಆ ಪಾತ್ರವನ್ನು ವಾಮಿಕಾ ಗಾಬ್ಬಿ ಎನ್ನುವವರು ಮಾಡುತ್ತಿದ್ದು, ನಯನತಾರಾಗೆ ಇನ್ನೊಂದು ಪವರ್​ಫುಲ್ ಪಾತ್ರವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಆ ಪಾತ್ರ ಏನಿರಬಹುದು ಎಂದು ಸದ್ಯಕ್ಕೆ ಚಿತ್ರತಂಡ ಬಿಟ್ಟುಕೊಡುತ್ತಿಲ್ಲ. ಈ ಸರಣಿಯನ್ನು ರಾಜಮೌಳಿ ಮತ್ತು ಆರ್ಕಾ ಮೀಡಿಯಾ ವರ್ಕ್ಸ್ ನಿರ್ವಿುಸು ತ್ತಿದ್ದು, ದೇವ್ ಕಟ್ಟಾ ಹಾಗೂ ಪ್ರವೀಣ್ ಸತ್ತಾರು ಸೇರಿ ನಿರ್ದೇಶಿಸುತ್ತಿದ್ದಾರೆ.