ಕರೆಂಟ್​ ಬಿಲ್​ ಕಟ್ಟಲು ಪರಪುರುಷನ ಜತೆ ಮಲಗುವಂತೆ ಒತ್ತಾಯ: ಆಮೀರ್ ಖಾನ್ ಸಹೋದರನ ಕರಾಳ ಮುಖ ಬಿಚ್ಚಿಟ್ಟ ನಟಿ! Eva Grover  
ಸಿನಿವಾಣಿ

ಕರೆಂಟ್​ ಬಿಲ್​ ಕಟ್ಟಲು ಪರಪುರುಷನ ಜತೆ ಮಲಗುವಂತೆ ಒತ್ತಾಯ: ಆಮೀರ್ ಖಾನ್ ಸಹೋದರನ ಕರಾಳ ಮುಖ ಬಿಚ್ಚಿಟ್ಟ ನಟಿ! Eva Grover

ಪ್ರಮುಖ ಮುಖ್ಯಾಂಶಗಳು

  • ಆಮೀರ್ ಖಾನ್ ಸಹೋದರನಿಂದ ಅನುಭವಿಸಿದ ದೌರ್ಜನ್ಯದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಈವಾ ಗ್ರೋವರ್
  • ಮನೆಯವರ ವಿರೋಧ ಕಟ್ಟಿ ಓಡಿಹೋಗಿ ಮದುವೆಯಾದ ನಟಿಗೆ ಪತಿಯಿಂದಲೇ ಕಾದಿತ್ತು ಘೋರ ನರಕ
  • ಖಾಸಗಿ ಕ್ಷಣಗಳಲ್ಲಿ ದೈಹಿಕ ಹಲ್ಲೆ ನಟಿ ಈವಾ ಗ್ರೋವರ್ ವೈಯಕ್ತಿಕ ಜೀವನದ ಭೀಕರ ಸತ್ಯ ಬಹಿರಂಗ
  • ಬೇರೆ ಪುರುಷರ ಜೊತೆ ಸಂಬಂಧ ಬೆಳೆಸಲು ಪತಿಯೇ ಒತ್ತಾಯಿಸುತ್ತಿದ್ದ ಎಂದು ಆಘಾತಕಾರಿ ಸತ್ಯ ನುಡಿದ ನಟಿ
ಮುಂಬೈ: ಕಲರ್​ಫುಲ್​ ಚಿತ್ರರಂಗದ ಹಿಂದೆ ಅದೆಷ್ಟೋ ಕರಾಳ ಸತ್ಯಗಳು, ಕಣ್ಣೀರಿಡುವ ಕಥೆಗಳು ಅಡಗಿರುತ್ತವೆ. 'ಬಡೇ ಅಚ್ಚೇ ಲಗ್ತೇ ಹೈ', 'ಆಫೀಸ್ ಆಫೀಸ್', 'ಸಿಐಡಿ'ಯಂತಹ ಸೂಪರ್‌ಹಿಟ್ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ಕಿರುತೆರೆ ನಟಿ ಈವಾ ಗ್ರೋವರ್ ( Eva Grover ) ಅವರ ವೈಯಕ್ತಿಕ ಜೀವನದ ಕರಾಳ ಸತ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅವರ ಸಹೋದರ ಹೈದರ್ ಅಲಿ ಖಾನ್ ಅವರನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದ ಈವಾ ಗ್ರೋವರ್, ಆ ನಂತರ ತಾನು ಅನುಭವಿಸಿದ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕೇವಲ 18 ದಿನಗಳ ಕಾಲಾವಧಿಯ ಪ್ರೀತಿಯಲ್ಲಿ ಹೈದರ್ ಅವರ ಸಭ್ಯ ವರ್ತನೆಯನ್ನು ಮಾತ್ರ ಕಂಡಿದ್ದ ಈವಾ, ಅವರನ್ನು ಕಣ್ಣು ಮುಚ್ಚಿ ನಂಬಿ ವಿವಾಹವಾಗಿದ್ದರು.
ಆದರೆ, ಮದುವೆಯಾದ ಮೂರನೇ ದಿನದಿಂದಲೇ ನಟಿಯ ಪಾಲಿಗೆ ನರಕದ ಬಾಗಿಲು ತೆರೆದುಕೊಂಡಿತ್ತು. ಖಾಸಗಿ ಕ್ಷಣಗಳಲ್ಲಿ ಹೈದರ್ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಲು ಪ್ರಾರಂಭಿಸಿದಾಗ ನಟಿ ಕಂಗಾಲಾಗಿದ್ದರು. ಹೈದರ್ ಅಲಿ 'ಸಿಜೋಫ್ರೇನಿಯಾ' ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂಬ ಸತ್ಯ ಮದುವೆಯಾದ ಮೇಲಷ್ಟೇ ಈವಾ ಅವರಿಗೆ ಅರಿವಿಗೆ ಬಂದಿತ್ತು.
ದೈಹಿಕ ಹಿಂಸೆಯಷ್ಟೇ ಅಲ್ಲದೆ, ಹೈದರ್‌ನಿಂದ ನಟಿಗೆ ತೀವ್ರ ತರದ ಮಾನಸಿಕ ಕಿರುಕುಳವೂ ಎದುರಾಗಿತ್ತು. ಮನೆಯ ಕರೆಂಟ್ ಬಿಲ್ ಪಾವತಿಸಲು ಮತ್ತು ಮಗುವಿನ ಖರ್ಚಿಗಾಗಿ ಬೇರೆ ಪುರುಷರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಸ್ವತಃ ಗಂಡನೇ ಒತ್ತಾಯಿಸುತ್ತಿದ್ದ ಎಂಬ ಆಘಾತಕಾರಿ ಸತ್ಯವನ್ನು ಈವಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಅಸಹ್ಯಕರ ನಡವಳಿಕೆಯೇ ಇಬ್ಬರ ಸಂಬಂಧ ಶಾಶ್ವತವಾಗಿ ಮುರಿಯಲು ಕಾರಣವಾಯಿತು.
ಮದುವೆಯಾಗಿ ಒಂದು ಮಗಳಿದ್ದರೂ, ಗಂಡನ ಕ್ರೂರ ದೌರ್ಜನ್ಯ ಮತ್ತು ಅಮಾನವೀಯ ಹಿಂಸೆಯನ್ನು ತಾಳಲಾರದೆ ಈವಾ ಗ್ರೋವರ್ ಐದು ವರ್ಷಗಳ ನಂತರ ಹೈದರ್ ಅಲಿ ಖಾನ್ ಅವರಿಗೆ ವಿಚ್ಛೇದನ ನೀಡಿದರು. ಆ ಕರಾಳ ದಿನಗಳಿಂದ ಹೊರಬಂದ ನಂತರ ನಟಿ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ ಮತ್ತು ಸ್ವತಂತ್ರವಾಗಿ ತಮ್ಮ ಬದುಕನ್ನು ಕಟ್ಟಿಕೊಂಡರು.
90ರ ದಶಕದ ಮಧ್ಯಭಾಗದಲ್ಲಿ 'ಕಾಟ್ಟುಮರಕ್ಕಾರನ್' ಎಂಬ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಈವಾ ಗ್ರೋವರ್, ಮುಂದೆ ಹಲವು ಬಾಲಿವುಡ್ ಸಿನಿಮಾಗಳು ಹಾಗೂ ಪ್ರಸಿದ್ಧ ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಪ್ರೀತಿ ಗಳಿಸಿದರು. ಆದರೆ, ಅವರ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಈ ಭೀಕರ ಅನುಭವಗಳು ಅಭಿಮಾನಿಗಳ ಮನ ಕಲಕುವಂತೆ ಮಾಡಿವೆ, (ಏಜೆನ್ಸೀಸ್​).