ಸಿನಿವಾಣಿ

ಆಶಿಕಾ ರಂಗನಾಥ್​​ಗೆ ಸಿಕ್ಕ ಬರ್ತ್​ಡೇ ಗಿಫ್ಟ್​ಗಳಿವು...

ಸ್ಯಾಂಡಲ್​ವುಡ್ ನಟಿ ಆಶಿಕಾ ರಂಗನಾಥ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿ ಬಳಗ ಸೋಷಿಯಲ್ ಮೀಡಿಯಾದಲ್ಲಿ ಸಿಡಿಪಿ ಬಿಡುಗಡೆ ಮಾಡಿ ಹಾರೈಸಿದರೆ, ಇತ್ತ ಚಿತ್ರತಂಡದವರು ಆಶಿಕಾ ಜನ್ಮದಿನಕ್ಕೆ ಬಗೆಬಗೆ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.

‘ಮದಗಜ’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಆಶಿಕಾ, ಇದೀಗ ಅವರ ಬರ್ತ್​ಡೇಗೆ ಅವರ ಮತ್ತೊಂದು ಹೊಸ ಅವತಾರವನ್ನು ಪೋಸ್ಟರ್ ಮೂಲಕ ತಂಡ ಬಿಡುಗಡೆ ಮಾಡಿದೆ. ಸಿಗರೇಟ್ ಸೇದುವ ಭಂಗಿಯ ಅವರ ಲುಕ್ ಕುತೂಹಲ ಮೂಡಿಸಿದೆ. ಅದೇ ರೀತಿ ‘ಅವತಾರ ಪುರುಷ’, ‘ರೇಮೊ’, ‘ಗರುಡ’ ಚಿತ್ರತಂಡಗಳಿಂದಲೂ ಪೋಸ್ಟರ್​ಗಳ ಉಡುಗೊರೆ ಸಿಕ್ಕಿದೆ. ಈ ಎಲ್ಲ ಸಿನಿಮಾಗಳ ಕೆಲಸಗಳು ಮುಗಿದಿದ್ದು, ಇನ್ನೇನು ಎಲ್ಲವೂ ಮೊದಲಿನಂತಾಗುತ್ತಿದ್ದಂತೆ ಚಿತ್ರಗಳು ಒಂದೊಂದಾಗಿ ಬಿಡುಗಡೆ ಆಗಲಿವೆ.