ಬೆಂಗಳೂರು: ಸ್ಯಾಂಡಲ್ವುಡ್ ನಟ ಶರಣ್ ಇವತ್ತು ಡಬಲ್ ಸಂಭ್ರಮದಲ್ಲಿದ್ದಾರೆ. ಕ್ವಾರಂಟೈನ್ ಲಾಕ್ಡೌನ್ ಹೊತ್ತಲ್ಲೂ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಅದಕ್ಕೆ ಕಾರಣ ಇಂದು (ಏ. 15) ಶರಣ್ ತಾಯಂದಿರ ಜನ್ಮದಿನ. ಆ ಬರ್ತಡೇ ಪ್ರಯುಕ್ತ ವಿಶೇಷವಾದ ಎಂದೂ ನೋಡಿರದ ಫೋಟೋವೊಂದನ್ನು ಶರಣ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೌದು, ಇವತ್ತು ಶರಣ್ ತಾಯಿಯರಾದ ರಾಧಾ ಮತ್ತು ರುಕ್ಮಿಣಿ ಅವರ ಜನ್ಮದಿನ. ಈ ವಿಶೇಷ ದಿನದ ಪ್ರಯುಕ್ತ ಹಲವು ದಶಕಗಳ ಹಿಂದಿನ ಅಂದರೆ ಅಮ್ಮಂದಿರ ಬಾಲ್ಯವನ್ನು ನೆನಪಿಸುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋದಲ್ಲಿ ಕೈಯಲ್ಲಿ ಆರತಿ ಹಿಡಿದು ನಿಂತ ರಾಧಾ ಮತ್ತು ರುಕ್ಮಿಣಿ ನಿಂತಿದ್ದಾರೆ. ‘ಇಂದು ನನ್ನ ತಾಯಂದಿರ ಜನುಮದಿನ. ನನ್ನ ನೆಚ್ಚಿನ ಒಂದು ಸುಂದರ ಹಾಗೂ ಅಪರೂಪದ ಭಾವಚಿತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ’ ಎಂದಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ‘ಅವತಾರ ಪುರುಷ’ ಚಿತ್ರದ ಕೊನೇ ಹಂತದ ಕೆಲಸಗಳಲ್ಲಿ ಶರಣ್ ತೊಡಗಿಸಿಕೊಂಡಿದ್ದಾರೆ. ಇನ್ನುಳಿದಂತೆ ಹಲವು ಸಿನಿಮಾಗಳಿಗೆ ಲಾಕ್ಡೌನ್ ಬಳಿಕ ಚಾಲನೆ ಸಿಗಲಿದೆ.