ಸಿನಿವಾಣಿ

ಮಾದಕ ನಟಿ ಶ್ರದ್ಧಾ ಕಪೂರ್ ಮದುವೆಯಂತೆ!

ಮಾದಕ ನಟಿ ಶ್ರದ್ಧಾ ಕಪೂರ್ ಮದುವೆಯಂತೆ! ಸೆಲೆಬ್ರಿಟಿ ಛಾಯಾಗ್ರಾಹಕ ರೋಹನ್ ಶ್ರೇಷ್ಠರನ್ನು ಮದುವೆ ಆಗ್ತಾರಂತೆ ಎಂಬ ವದಂತಿ ಬಾಲಿವುಡ್ ಸರ್ಕಲ್​ನಲ್ಲಿ ಸದ್ಯ ಓಡಾಡುತ್ತಿದೆ. ನಾವಿಬ್ರು ಒಳ್ಳೆ ಫ್ರೆಂಡ್ಸ್ ಎಂದು ಹಿಂದೆ ಹಲವು ಬಾರಿ ಹೇಳಿರುವ ಶ್ರದ್ಧಾ, ಹೊಸ ವದಂತಿ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ, ಶ್ರದ್ಧಾ ತಂದೆ, ಬಾಲಿವುಡ್​ನ ಪ್ರಖ್ಯಾತ ಖಳನಟ ಶಕ್ತಿ ಕಪೂರ್​ಗಂತೂ ಇದು ಸ್ವಲ್ಪ ತಲೆ ನೋವು ತಂದಿದೆ.

ಸಂದರ್ಶನವೊಂದರಲ್ಲಿ ಮಗಳ ಮದುವೆ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಶಕ್ತಿ, ಶ್ರದ್ಧಾ ಮದುವೆಗೆ ಸಿದ್ಧಳಾಗಿದ್ದಾಳೆಂದರೆ ನನ್ನ ಅಭ್ಯಂತರವೇನೂ ಇಲ್ಲ. ಈ ಕಾಲದಲ್ಲಿ ಅಪ್ಪ-ಅಮ್ಮನಿಗೆ ಹೆಚ್ಚೇನೂ ಕೆಲಸ ಇರುವುದಿಲ್ಲ. ಎಲ್ಲವನ್ನೂ ಮಕ್ಕಳೇ ನಿರ್ಧರಿಸಿಬಿಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದರೆ, ಭಯವಾಗುತ್ತದೆ. ಹಾಗಾಗಿ ಬಾಳಸಂಗಾತಿ ಆಯ್ಕೆ ಮಾಡುವಾಗ ಹೆಚ್ಚಿನ ವಿವೇಚನೆ ಅಗತ್ಯ ಎಂದಷ್ಟೇ ಮಗಳಿಗೆ ಸಲಹೆ ನೀಡಬಯಸುತ್ತೇನೆ ಎಂದಿದ್ದಾರೆ.