ಮುಂಬೈ: ಸೌತ್ ಸ್ಟಾರ್ ವಿಜಯ್ ಸೇತುಪತಿ ಮತ್ತು ಬಾಲಿವುಡ್ ನಟ ಶಾಹೀದ್ ಕಪೂರ್ ಇಬ್ಬರೂ ಒಟ್ಟಿಗೆ ತೆರೆಹಂಚಿಕೊಳ್ಳಲಿದ್ದಾರೆ. ಹಾಗೆಂದ ಮಾತ್ರಕ್ಕೆ ಇದ್ಯಾವುದೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಬದಲಿಗೆ ವೆಬ್ಸಿರೀಸ್ನಲ್ಲಿ ಇವರಿಬ್ಬರು ಮೊದಲ ಬಾರಿಗೆ ಎದುರಾಗಲಿದ್ದಾರೆ.
ಈಗಾಗಲೇ ಈ ಇಬ್ಬರು ಸ್ಟಾರ್ ನಟರು ನಟಿಸಲಿರುವುದು ಸುದ್ದಿಯಾಗಿತ್ತಾದರೂ, ಆ ವೆಬ್ಸಿರೀಸ್ನ ಶೀರ್ಷಿಕೆ ಏನಾಗಿರಲಿದೆ ಎಂಬುದು ಬಹಿರಂಗವಾಗಿರಲಿಲ್ಲ. ಇದೀಗ ಆ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ವೆಬ್ಸರಣಿಗೆ ‘ಗವಾರ್’ ಎಂಬ ಶೀರ್ಷಿಕೆ ಇಡಲಾಗಿದೆ.
ಈಗಾಗಲೇ ಹಿಂದಿಯಲ್ಲಿ ಗೋ ಗೋವಾ ಗಾನ್ ಸಿನಿಮಾ ನಿರ್ದೇಶನ ಮಾಡಿದ್ದ ರಾಜ್ ನಿಂಬಿಮೋರು ಮತ್ತು ಕೃಷ್ಣ ಡಿಕೆ ಈ ವೆಬ್ಸರಣಿಯನ್ನು ನಿರ್ದೇಶನ ಮಾಡಲಿದ್ದಾರೆ. ಆ್ಯಕ್ಷನ್ ಥ್ರಿಲ್ಲರ್ ಶೈಲಿಯ ವೆಬ್ಸರಣಿ ಜನವರಿಯಿಂದ ಶುರುವಾಗಲಿದೆ.
ಮುಂಬೈ ಮತ್ತು ಗೋವಾದಲ್ಲಿ ಸಿರೀಸ್ನ ಬಹುತೇಕ ಶೂಟಿಂಗ್ ನಡೆಯಲಿದೆ. 8 ಅಥವಾ 10 ಏಪಿಸೋಡ್ಗಳಿರುವ ಸರಣಿಯ ಚಿತ್ರೀಕರಣ ಏಪ್ರಿಲ್ ವೇಳೆಗೆ ಮುಗಿಸುವ ಪ್ರಾನ್ ತಂಡದ್ದು. ಇದಾದ ಬಳಿಕ ಯೋಧ ಚಿತ್ರದಲ್ಲಿಯೂ ಶಾಹಿದ್ ನಟಿಸಲಿದ್ದಾರೆ. ಇತ್ತ ಹಲವು ತಮಿಳು ಪ್ರಾಜೆಕ್ಟ್ಗಳಲ್ಲಿ ಸೇತುಪತಿ ತೊಡಗಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)