ಬೆಂಗಳೂರು: ಸ್ಯಾಂಡಲ್ವುಡ್ ನಟ ಸತೀಶ್ ನೀನಾಸಂ ಇನ್ನೇನು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಅಷ್ಟೇ ಅಲ್ಲ ಜಿಮ್ನಲ್ಲಿ ಬೆವರಿಳಿಸಿ ಮೈ ಹುರಿಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೂ ಮುನ್ನ ನೈಟ್ ಡ್ಯೂಟಿ ಸಹ ಮಾಡುತ್ತಿದ್ದಾರೆ. ಹೌದು, ನಿತ್ಯ ಮನೆಬಳಿಯ ಹಲವು ಸ್ನೇಹಿತರ ಜತೆಗೆ ಒಂದಷ್ಟು ಹೊತ್ತು ಸತೀಶ್ ಕಾಲಕಳೆಯುತ್ತಾರೆ. ಮಾತು ಬಾರದ ಮುಗ್ದ ಶ್ವಾನಗಳಿಗೆ ಆಹಾರ ನೀಡಿ, ಅವುಗಳ ಹಸಿವು ನೀಗಿಸುತ್ತಿದ್ದಾರೆ. ಹಾಗೇ ಅವುಗಳ ಜತೆ ಕಾಲ ಕಳೆದ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ನೈಟ್ ಡ್ಯೂಟಿ ಎಂಬ ಕ್ಯಾಪ್ಶನ್ ನೀಡಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ..