ಹಸೆಮಣೆ ಏರಿದ ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್.
14 ವರ್ಷದಿಂದ ಪ್ರೀತಿಯಲ್ಲಿದ್ದ ಹುಡುಗನ ಜೊತೆಗೆ ಕೊನೆಗೂ ಮದುವೆ.
ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದ ತಿರುಚಿತ್ರಂಬಲಂನ ನಟಿ.
Priya Bhavani Shankar marries longtime boyfriend : ತಿರುಚಿತ್ರಂಬಲಂ, ಇರುಮುಡಿ, ಝೀಬ್ರಾ, ಯಾನೈ, ಕಡೈ ಕುಟ್ಟಿ ಸಿಂಗಂ ಸೇರಿದಂತೆ ಕಾಲಿವುಡ್, ಟಾಲಿವುಡ್ನಲ್ಲಿ ಮಿಂಚಿರುವ ನಟಿ ಪ್ರಿಯಾ ಭವಾನಿ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಬಹುಕಾಲದ ಗೆಳೆಯ ರಾಜ್ ವೇಲ್ ರಾಜ್ ಅವರೊಂದಿಗೆ ಹಸಮಣೆ ಏರಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮದ ವಿಡಿಯೋಗಳು ಭಾರಿ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕಾಲಿವುಡ್ ನಟಿ ಪ್ರಿಯಾ ಭವಾನಿ ಶಂಕರ್ ಕೆಂಪು ಸೀರೆ, ಹರಿಬಿಟ್ಟ ಕೂದಲಿಗೆ ಒಂದು ಚಿಕ್ಕ ಬನ್, ಸಿಂಪಲ್ ಗೋಲ್ಡನ್ ಜ್ಯುವೆಲ್ಲರಿ ಧರಿಸಿ ಮಿಂಚುತ್ತಿದ್ದರೆ, ರಾಜ್ವೇಲ್ ರಾಜ್ ಅವರು ವರನಂತೆ ಬಿಳಿ ಧೋತಿ, ಕ್ರೀಮ್ ಬಣ್ಣದ ಕುರ್ತಾ ಧರಿಸಿ ಮಿಂಚಿದ್ದಾರೆ. ಇಬ್ಬರನ್ನು ಅವರ ಗೆಳೆಯ-ಗೆಳೆತಿಯರು ಮಂಟಪಕ್ಕೆ ಕರೆದುಕೊಂಡು ಬರುತ್ತಿರುವ ದೃಶ್ಯ, ತಾಳಿ ಕಟ್ಟುತ್ತಿರುವ ದೃಶ್ಯವು ವೈರಲ್ ಆಗಿದೆ.
ಇರುಮುಡಿ ಖ್ಯಾತಿಯ ನಟಿ ಪ್ರಿಯಾ ಭವಾನಿ ಶಂಕರ್ ಮತ್ತು ರಾಜ್ವೇಲ್ ರಾಜ್ ಸಂಬಂಧ ಇಂದು ನಿನ್ನೆಯದಲ್ಲ. ಕಾಲೇಜು ದಿನಗಳಿಂದ ಅಂದರೆ, 14 ವರ್ಷದಿಂದ ಇಬ್ಬರು ಪ್ರೀತಿಯಲ್ಲಿದ್ದರು. 2022ರಲ್ಲಿ ಇಬ್ಬರು ಒಟ್ಟಾಗಿ ಫ್ಲಾಟ್ ಖರೀದಿ ಮಾಡಿದ್ದು, ಭಾರಿ ಸದ್ದು ಮಾಡಿತ್ತು. ಈ ಒತ್ತಡ ಮತ್ತು ನಾನಾ ಚರ್ಚೆಯ ಮಧ್ಯೆಯೂ ಈ ನವ ಜೋಡಿ ಮದುವೆ ಬಗ್ಗೆ ನಿರ್ಧರಿಸಿರಲಿಲ್ಲ.
ಪ್ರಿಯಾ ಭವಾನಿ ಶಂಕರ್ ಮತ್ತು ರಾಜ್ವೇಲ್ ರಾಜ್ ಮದುವೆ ನ.11ರಂದು ಸರಳವಾಗಿ, ಕುಟುಂಬಸ್ಥರು, ಗೆಳೆಯ-ಗೆಳತಿಯರ ಸಮ್ಮುಖದಲ್ಲಿ ಮಾತ್ರ ನಡೆದಿದೆ. ಇಲ್ಲಿ ಯಾವುದೇ ಸೆಲಬ್ರೆಟಿಗಳ ಅಬ್ಬರವಿರಲಿಲ್ಲ. ಜೊತೆಗೆ ಇತ್ತೀಚೆಗೆ ಹಿಟ್ ಕಂಡ ಇರುಮುಡಿ ಸಿನಿಮಾ ತಂಡವು ಸಹ ಇರಲಿಲ್ಲ.
ನಿರೂಪಕಿಯಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಪ್ರಿಯಾ ಭವಾನಿ ಶಂಕರ್..ನಂತರ ನಟಿಯಾಗಿ ಕಾಲಿವುಡ್ನಲ್ಲಿ ಮಿಂಚಿದರು. ಟಾಲಿವುಡ್ನಲ್ಲಿ ಮನ್ನಣೆ ಪಡೆದುಕೊಂಡರು. ಹಾಟ್ಸ್ಪಾಟ್ 2 ಪ್ರಿಯಾ ಭವಾನಿ ಶಂಕರ್ ನಟಿಸಿದ ಕೊನೆಯ ತಮಿಳು ಸಿನಿಮಾ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಮತ್ತು ಸಿಧಾರ್ಥ್ ನಟನೆಯ ಇಂಡಿಯನ್ ಫ್ರಾಂಚೈಸಿಯಲ್ಲಿ ಪ್ರಿಯಾ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ, (ಏಜೆನ್ಸೀಸ್).