ಬೆಂಗಳೂರು: ಬಿಗ್ ಬಾಸ್ ಸೀಸನ್ 4ರ ವಿಜೇತ ಮತ್ತು ನಟ ಪ್ರಥಮ್ ‘ಡ್ರೋನ್ ಪ್ರಥಮ್ ಶೀರ್ಷಿಕೆಯ ಸಿನಿಮಾ ಘೋಷಣೆ ಮಾಡಿರುವುದು ಗೊತ್ತಿರುವ ವಿಚಾರ. ಈ ಸಿನಿಮಾದ ಶೂಟಿಂಗ್ ಮುಂದಿನ ವಾರ ಶುರುವಾಗಲಿದೆ. ಹೀಗಿರುವಾಗಲೇ ರಿಯಲ್ ಡ್ರೋನ್ ಪ್ರತಾಪ್ ಅವರನ್ನು ರೀಲ್ ಡ್ರೋನ್ ಪ್ರಥಮ್ ಭೇಟಿಯಾಗಿದ್ದಾರೆ. ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.
‘ಇದು ವರ್ಷದ ಅತ್ಯುತ್ತಮ ಛಾಯಾಚಿತ್ರ. ಡ್ರೋನ್ ಪ್ರಥಮ್ ಮೀಟ್ಸ್ ಡ್ರೋನ್ ಪ್ರತಾಪ್. ಇನ್ಮೇಲೆ ಇವ್ನು ನನ್ನ ತಮ್ಮ. ನಮ್ಮಿಬ್ಬರದ್ದು ಅಪೂರ್ವ ಸಂಗಮ. ಇನ್ನೇನು ಶೀಘ್ರದಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲಿದ್ದೇವೆ’ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ. ಸ್ವತಃ ಪ್ರಥಮ್ ನಿರ್ದೇಶನ ಮಾಡಲಿರುವ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಮುಂಬೈ ಮೂಲದ ಬೆಡಗಿಯೊಬ್ಬರನ್ನೂ ಅವರು ಪರಿಚಯಿಸಲಿದ್ದಾರಂತೆ.