ಆ ಕಡೆ ಅಮ್ಮ ರೀಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದರೆ, ಈ ಕಡೆ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗುತ್ತಿದ್ದಾಳೆ. ಯಾವ ಅಮ್ಮ-ಮಗಳ ಬಗ್ಗೆ ಈ ಸುದ್ದಿ ಎಂಬ ಪ್ರಶ್ನೆ ಬರಬಹುದು. ‘ಮೈನೇ ಪ್ಯಾರ್ ಕಿಯಾ’ ಚಿತ್ರದ ಭಾಗ್ಯಶ್ರೀ ನೆನಪಿರಬಹುದು. ಕನ್ನಡದಲ್ಲೂ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದರು ಆಕೆ. ಬಹಳ ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದ ಭಾಗ್ಯಶ್ರೀ, ಪ್ರಭಾಸ್ ಅಭಿನಯದ ‘ರಾಧೇ ಶ್ಯಾಮ್ ಚಿತ್ರದಲ್ಲಿ ಪುನಃ ಬಣ್ಣ ಹಚ್ಚಿದ್ದಾರೆ.
ತಾನು ಚಿತ್ರರಂಗಕ್ಕೆ ವಾಪಸ್ಸು ಬರುತ್ತಿರುವುದಷ್ಟೇ ಅಲ್ಲ, ಮಗಳನ್ನೂ ಕರೆತರುತ್ತಿದ್ದಾರೆ ಅವರು. ಭಾಗ್ಯಶ್ರೀ ತಮ್ಮ ಮಗಳು ಆವಂತಿಕಾಳನ್ನು ತೆಲುಗು ಚಿತ್ರವೊಂದರ ಮೂಲಕ ಪರಿಚಯಿಸುವುದಕ್ಕೆ ಮುಂದಾಗಿದ್ದಾರೆ. ಬೆಲ್ಲಂಕೊಂಡ ಶ್ರೀನಿವಾಸ್ ಅಭಿನಯದ ಹೊಸ ಚಿತ್ರದಲ್ಲಿ ಆವಂತಿಕಾ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದು, ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದೆ. ಈ ಹೆಸರಿಡದ ಚಿತ್ರವನ್ನು ಸತೀಶ್ ವಾಗೀಶ ನಿರ್ವಿುಸುತ್ತಿದ್ದಾರೆ. (ಏಜೆನ್ಸೀಸ್)