ಸಿನಿವಾಣಿ

ನಟ ಅಕ್ಷಯ್ ಕುಮಾರ್ ಮತ್ತೆ ದೇವರು

Webdesk - Ravikanth

ಬಾಲಿವುಡ್​ನಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವವರು ಯಾರೆಂದರೆ, ಮೊದಲ ಹೆಸರು ಬರುವುದೇ ಅಕ್ಷಯ್ ಕುಮಾರ್ ಅವರದ್ದು. ಸದ್ಯ ಏನಿಲ್ಲ ಅಂದರೂ, ಮೂರು ಚಿತ್ರಗಳು ಬಿಡುಗಡೆ ಸನಿಹದಲ್ಲಿದ್ದರೆ, ಇನ್ನೂ ಮೂರು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಈ ನಡುವೆ ಆಗೊಂದು ಈಗೊಂದು ಹೊಸ ಪ್ರಾಜೆಕ್ಟ್ ಗಳ ಘೋಷಣೆ ಆಗುತ್ತಲೇ ಇರುತ್ತವೆ. ಇದೀಗ ‘ಓ ಮೈ ಗಾಡ್’ ಚಿತ್ರದ ಸೀಕ್ವೆಲ್ ಘೋಷಣೆ ಆಗಿದೆ. ನೀಲವರ್ಣೀಯ ಲುಕ್​ನಲ್ಲಿ ಅಕ್ಷಯ್ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ಮತ್ತೆ ದೇವರಾಗುತ್ತಿದ್ದಾರೆ ಅಕ್ಷಯ್!

2012ರಲ್ಲಿ ‘ಓ ಮೈ ಗಾಡ್’ ಸಿನಿಮಾ ತೆರೆಕಂಡಿತ್ತು. ಇದೀಗ ಅದಾಗಿ ಒಂಬತ್ತು ವರ್ಷಗಳ ಬಳಿಕ ಸೀಕ್ವೆಲ್ ಸೆಟ್ಟೇರಿದೆ. ಈ ಮೊದಲೇ ಸೀಕ್ವೆಲ್ ಮೂಡಿಬರಲಿದೆ ಎಂಬ ಸುದ್ದಿ ಇತ್ತಾದರೂ, ಅಧಿಕೃತವಾಗಿರಲಿಲ್ಲ. ಇದೀಗ ಮಧ್ಯ ಪ್ರದೇಶದ ಉಜೆ ್ಜನಿಯಲ್ಲಿ ಶೂಟಿಂಗ್ ಶುರುವಾಗಿದೆ. ಅಕ್ಷಯ್ ಜತೆಗೆ ಯಾಮಿ ಗೌತಮ್ ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ. ಅಮಿತ್ ರಾಯ್ ನಿರ್ದೇಶನದ ಈ ಚಿತ್ರವನ್ನು ಅಕ್ಷಯ್ ಒಡೆತನದ ಕೇಪ್ ಆಫ್ ಗುಡ್ ಫಿಲಂಸ್ ಸಂಸ್ಥೆ ನಿರ್ವಿುಸುತ್ತಿದೆ. ಈ ಸಿನಿಮಾ ಹೊರತುಪಡಿಸಿದರೆ, ಇತ್ತೀಚೆಗಷ್ಟೇ ಅಕ್ಷಯ್ ಅವರ ‘ಗೋರ್ಖಾ’ ಸಿನಿಮಾ ಘೋಷಣೆ ಆಗಿತ್ತು. ‘ರಾಮ್ ಸೇತು’, ‘ರಕ್ಷಾಬಂಧನ್’ ಚಿತ್ರದ ಕೆಲಸಗಳಲ್ಲಿಯೂ ಅಕ್ಕಿ ಬಿಜಿಯಾಗಿದ್ದಾರೆ. -ಏಜೆನ್ಸೀಸ್