ಸಿನಿವಾಣಿ

PHOTO Gallery | ಮಾಡೆಲ್ ಅವಿವಾ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡ ಅಭಿಷೇಕ್ ಅಂಬರೀಷ್; ಇಲ್ಲಿವೆ ನೋಡಿ ಎಂಗೇಜ್ಮೆಂಟ್ ಫೋಟೋಗಳು

ಬೆಂಗಳೂರು: ನಟ ಅಭಿಷೇಕ್​ ಅಂಬರೀಷ್ (Abhishek Ambareesh)​ ಅವರ ಮದುವೆ ಸುದ್ದಿ ಸ್ಯಾಂಡಲ್​ವುಡ್​ (Sandalwood) ಅಂಗಳದಲ್ಲಿ ಕೇಳಿಬಂದಿತ್ತು. ಈ ಸುದ್ದಿಯನ್ನು ಸ್ವತಃ ಅಭಿಷೇಕ್​ ತಳ್ಳಿ ಹಾಕಿದ್ದರು. ಆದರೆ, ಮದುವೆ ವಿಚಾರವನ್ನು ಅಂಬರೀಷ್​ ಕುಟುಂಬದ ಆಪ್ತ ಮೂಲಗಳು ಖಚಿತಪಡಿಸಿದ್ದವು. ಇದೀಗ ಅದು ಅಧಿಕೃತವಾಗಿದ್ದು, ಇಂದು (ಡಿ.11) ಅಭಿಷೇಕ್​ ಅಂಬರೀಷ್​ ತಮ್ಮ ಗೆಳತಿ ಹಾಗೂ ಮಾಡೆಲ್​ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಷ್ ಮಿಂಚಿದ್ದಾರೆ.
ಅಭಿಷೇಕ್-ಅವಿವಾ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಬಂದು ಶುಭ ಹಾರೈಸಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಸೇರಿದಂತೆ ಅಭಿಷೇಕ್ ಸ್ನೇಹಿತರು ಶುಭಕಾರ್ಯಕ್ಕೆ ಆಗಮಿಸಿದ್ದರು.
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಸಿನಿಮಾ ರಂಗದ ತಾರೆಯರು ಹಾಗೂ ರಾಜಕಾರಣಿಗಳು ಆಗಮಿಸಿದ್ದರು.
ಅವಿವಾ ಸಹ ಒಬ್ಬ ನಟಿ ಮತ್ತು ಅಭಿಷೇಕ್​ಗಿಂತ ಮೊದಲೇ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದರು. ‘ಅಲೆ’ ಎಂಬ ಚಿತ್ರದಲ್ಲಿ ಅವಿವಾ ಬಿದ್ದಪ್ಪ ನಾಯಕಿಯಾಗಿ ಮಿಂಚಿದ್ದರು.
ಸದ್ಯ ಅಭಿಷೇಕ್​ ಕಾಳಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಸದ್ಯದಲ್ಲಿ ಹಸೆಮಣೆ ಏರಲಿದ್ದಾರೆ.