- ರವಿ ಮೋಹನ್ ಮತ್ತು ಆರತಿ ನಡುವಿನ ವಿವಾದದಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದಾನೆ
- ನಟ ರವಿ ಮೋಹನ್ ಆರೋಪಕ್ಕೆ ಮೌನ ಮುರಿದ ಆರತಿ ತಾಯಿ, ನಿರ್ಮಾಪಕಿ ಸುಜಾತಾ
- ಕೈ ಕುಯ್ದುಕೊಂಡಿದ್ದು ಯಾರು ಎನ್ನುವುದು ಗೊತ್ತಿದೆ ಎಂದ ಸುಜಾತಾ ವಿಜಯಕುಮಾರ್
ಮೊಮ್ಮಗ ಹತ್ತನೇ ತರಗತಿಗೆ ಪರೀಕ್ಷೆ ಬರೆಯುತ್ತಿದ್ದಾನೆ, ಆತ ಸಣ್ಣ ವಯಸ್ಸಿನಲ್ಲೇ ಕೇಳಬಾರದಾದಂತಹ ವಿಚಾರ, ನೋಡಬಾರದ ಸನ್ನಿವೇಶಗಳನ್ನು ಕಂಡಿದ್ದಾನೆ. ಇದು ಅವನನ್ನು ಮಾನಸಿಕ ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. ಈ ವಿಚಾರ ಹೆಚ್ಚು ಎಳೆದಾಡಲು ಬಿಡದಂತೆ ನೋಡಿಕೊಳ್ಳುತ್ತೇವೆ ಎಂದು ಮಗಳು ಮತ್ತು ಅಳಿಯನ ಡಿವೋರ್ಸ್ ಕೇಸ್ ವಿವಾದದ ಬಗ್ಗೆ ಮಾತನಾಡಿದ್ದು, ಆರತಿ ತಾಯಿ ಮತ್ತು ನಿರ್ಮಾಪಕಿ ಸುಜಾತಾ ವಿಜಯಕುಮಾರ್.
ತಮಿಳು ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ಅವರ ವಿಚ್ಛೇದನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇತ್ತೀಚೆಗೆ ನಟ ರವಿ ಮೋಹನ್ ಸುದ್ದಿಗೋಷ್ಠಿ ನಡೆಸಿ ಪತ್ನಿ ಆರತಿ ಮತ್ತು ಅವರ ಕುಟುಂಬದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಅಲ್ಲದೆ ಇದಕ್ಕೆ ಪ್ರತಿಯಾಗಿ ಆರತಿಯವರು ಸಹ ಹುಲಿ ಸುಮ್ಮನಿದೆ ಎಂದ ಮಾತ್ರಕ್ಕೆ ಕೆಣಕಲು ಬರಬೇಡಿ ಎಂದು ಪೋಸ್ಟ್ ಹಂಚಿಕೊಂಡಿದ್ದರು.
ಮಾನಸಿಕವಾಗಿ ಒತ್ತಡ
ಈ ಘಟನೆಗಳ ಮಧ್ಯೆ ಸುಜಾತಾ ವಿಜಯಕುಮಾರ್ ಅವರು, ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದು, 'ನಾನು ಈ ವಿಷಯವನ್ನು ಅತಿಯಾಗಿ ಎಳೆದಾಡಲು ಬಿಡುವುದಿಲ್ಲ. ನನ್ನ ಮೊಮ್ಮಗ ಪ್ರಸ್ತುತ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಬರೆಯುತ್ತಿದ್ದಾನೆ. ಈ ಕೌಟುಂಬಿಕ ಕಲಹದಿಂದಾಗಿ ಅವನು ಈಗಾಗಲೇ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಅವನು ನೋಡಬಾರದ ಪರಿಸ್ಥಿತಿಗಳನ್ನು ನೋಡಿದ್ದಾನೆ. ಆದ್ದರಿಂದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ನಾವು ಬಯಸುವುದಿಲ್ಲ' ಎಂದು ಹೇಳಿದರು.
ಕೈ ಕಟ್ ಮಾಡ್ಕೊಂಡಿದ್ ಯಾರು?
ಮುಂದುವರೆದು, '2008 ರ ಹಳೆಯ ಸಂದರ್ಶನ ನೋಡಬಹುದು. ಅದರಲ್ಲಿ ಯಾರು ಯಾರಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದರು ಮತ್ತು ಮದುವೆಯಾಗಲು ಯಾರು ಕೈ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದರು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದರು. ಇನ್ನು ರವಿ ಮೋಹನ್ ಪ್ರತಿ ತಿಂಗಳು 25,000 ರೂಪಾಯಿ ನೀಡುತ್ತಿದ್ದರು ಎನ್ನುವ ಬಗ್ಗೆ ಮಾತನಾಡಿದ್ದು ಅದು ಒಬ್ಬ ಅಳಿಯನಾಗಿ ಅವರ ಕರ್ತವ್ಯವಾಗಿತ್ತು' ಎಂದರು.
ತಮಿಳುನಾಡಿನಲ್ಲಿ ಮಹಿಳೆಯರಿಗೆ ಅನ್ಯಾಯವಾದಾಗ ಜನರು ಧ್ವನಿ ಎತ್ತುತ್ತಾರೆ. ನಮಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆಯಿದೆ ಎಂದಿದ್ದಾರೆ. ಆರತಿಯವರ ಬೆಂಬಲಕ್ಕೆ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಸಹ ನಿಂತಿದ್ದಾರೆ. ಪ್ರಸ್ತುತ ರವಿ ಮೋಹನ್ ಮತ್ತು ಆರತಿ ಅವರ ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿದ್ದು, 2009 ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.