ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು, ಬದುಕು ಮೂರಾಬಟ್ಟೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶ ಸೇರಿದಂತೆ ರಸ್ತೆಗಳು ಜಲಾವೃತಗೊಂಡಿದ್ದು, ಬೆಳ್ಳಂದೂರು-ಮಾರತ್ತಹಳ್ಳಿ ರಸ್ತೆ ಕೆರೆಯಂತಾಗಿದೆ. ಕಿಲೋ ಮೀಟರ್ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ. ಇನ್ನು ರೇನ್ಬೋ ಡ್ರೈವ್ ಬಡಾವಣೆಗೆ ಜಲಕಂಠಕ ಸುತ್ತಿಕೊಂಡಿದೆ. ಎತ್ತ ನೋಡಿದರೂ ನೀರು.. ನೀರು... ರಣಭೀಕರ ಮಳೆ ಸೃಷ್ಟಿಸಿದ ಅವಾಂತರ ವಿಜಯವಾಣಿ ದಿನಪತ್ರಿಕೆಯ ಫೋಟೋಗ್ರಾಪರ್ ಸುಧೀಂದ್ರ ಶ್ರೀರಂಗರಾಜು ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ...