ಸಿನಿವಾಣಿ

ಸ್ವಾತಂತ್ರ್ಯೋತ್ಸವ ಪ್ರಬಂಧ ಸ್ಪರ್ಧೆ: ಸಾವಿರಾರು ವಿದ್ಯಾರ್ಥಿಗಳು ಭಾಗಿ, ವಿಜಯವಾಣಿ- ದಿಗ್ವಿಜಯ ನ್ಯೂಸ್​ ಆಯೋಜನೆ

arunakunigal

ಬೆಂಗಳೂರು: ವಿಜಯವಾಣಿ ಹಾಗೂ ದಿಗ್ವಿಜಯ 24/7 ಸುದ್ದಿ ವಾಹಿನಿ ವತಿಯಿಂದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಶನಿವಾರ (ಆ.6) ನಗರದ 10 ಕಾಲೇಜುಗಳಲ್ಲಿ ಅಂತರ ಕಾಲೇಜು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸ್ಪರ್ಧೆ ನಡೆದಿದ್ದು, ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಎಚ್​ಎಸ್​ಆರ್​ ಲೇಔಟ್​ನ ದ ಆಕ್ಸ್​ಫರ್ಡ್ ಕಾಲೇಜ್​ ಆಫ್​ ಬಿಜಿನೆಸ್​ ಮ್ಯಾನೇಜ್​ಮೆಂಟ್​, ವಿ.ವಿ. ಪುರಂನ ಬಿಐಟಿ ಕಾಲೇಜು, ಕೆ.ಆರ್​. ಪುರದ ಕೇಂಬ್ರಿಡ್ಜ್​ ತಾಂತ್ರಿಕ ಮಹಾವಿದ್ಯಾಲಯ, ಜಯನಗರ 7ನೇ ಬ್ಲಾಕ್​ನ ಸಿಟಿ ಕಾಲೇಜು, ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹನುಮಂತ ನಗರದ ಪಿಇಎಸ್​ ಕಾಲೇಜು, ಮಲ್ಲೇಶ್ವರದ ಸಿಲ್ವರ್​ ವ್ಯಾಲಿ ಡಿಗ್ರಿ ಕಾಲೇಜು, ಕೆಂಗೇರಿ ಉಪನಗರದ ಸರ್ಕಾರಿ ಪದವಿ ಕಾಲೇಜು, ಕನಕಪುರ ರಸ್ತೆ ಸೋಮನಹಳ್ಳಿಯ ಎಪಿಎಸ್​ ತಾಂತ್ರಿಕ ವಿದ್ಯಾಲಯ, ಯಲಹಂಕ ಉಪನಗರ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ನಡೆದಿದ್ದು, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

'ಟಾರ್ಗೆಟ್​ 2047- ಸ್ವಾಂತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಭಾರತ ಸ್ವಾತಂತ್ರ್ಯದ ಶತಮಾನೋತ್ಸವ ಅಂದರೆ ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಿರುವುದೇನು? ಇದರಲ್ಲಿ ಯುವ ಜನರ ಪಾತ್ರ ಏನು?' ಎಂಬುದರ ಕುರಿತು ಪ್ರಬಂಧ ಬರೆಯಲು ತಿಳಿಸಲಾಗಿತ್ತು. ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 5000 ರೂಪಾಯಿ, ದ್ವಿತೀಯ ಬಹುಮಾನ 3000 ರೂಪಾಯಿ, ತೃತೀಯ ಬಹುಮಾನ 2000 ರೂಪಾಯಿ.

ಸ್ವಾತಂತ್ರ್ಯೋತ್ಸವ ಪ್ರಬಂಧ ಸ್ಪರ್ಧೆಯ ಫೋಟೋಗಳು ಇಲ್ಲಿವೆ