ಸಿನಿವಾಣಿ

RSS ಕುರಿತ ಸರಣಿ ಮಾಡಲು ಮುಂದಾದ 6 ಮಂದಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು!

ರಾಷ್ಟ್ರೀಯ ಸ್ವಯಂಸ್ವೇವಕ ಸಂಘದ ಕುರಿತ ಸರಣಿ ನಿರ್ದೇಶಿಸಲು ಆರು ಮಂದಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರು ಕೈಜೋಡಿಸಿದ್ದಾರೆ. 1925ರ ಸೆ. 27ರಂದು ಸ್ಥಾಪನೆಯಾದ ಆರ್‌ಎಸ್‌ಎಸ್ 2025ಕ್ಕೆ 100 ವರ್ಷಗಳನ್ನು ಪೂರೈಸಲಿದ್ದು, ಆ ಸಂಭ್ರಮದಲ್ಲಿ ಈ ಸರಣಿ ಬಿಡುಗಡೆಯಾಗಲಿದೆ.

ಸರಣಿಯ ಹೆಸರು ‘ಒನ್ ನೇಷನ್’ ಅಥವಾ ‘ಏಕ್ ರಾಷ್ಟ್ರ್’ ಎಂಬ ಶೀರ್ಷಿಕೆಯಲ್ಲಿ ಮೂಡಿಬರಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೆ ಸರಣಿ ಘೋಷಣೆಯಾಗಿದ್ದು, ಆರ್‌ಎಸ್‌ಎಸ್ ಕಾರ್ಯಕರ್ತರ ತ್ಯಾಗ, ಬಲಿದಾನಗಳ ಸುತ್ತ ಈ ಸರಣಿ ಸಾಗುತ್ತದೆಯಂತೆ.

‘ಕಾಂಚೀವರಂ’ ಹಾಗೂ ‘ಮರಕ್ಕರ್: ಲಯನ್ ಆ್ ದಿ ಅರೇಬಿಯನ್ ಸೀ’ ಖ್ಯಾತಿಯ ಪ್ರಿಯದರ್ಶನ್, ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ, ‘ಪಿಂಜರ್’ ಖ್ಯಾತಿಯ ಡಾ. ಚಂದ್ರಪ್ರಕಾಶ್ ದ್ವಿವೇದಿ, ‘ಸರ್ರೋಶ್’ ನಿರ್ದೇಶಕ ಜಾನ್ ಮ್ಯಾಥ್ಯೂ ಮಥನ್, ‘ಆಕಾಶಿತೊರರ್ ಕೊಥಾರೆ’, ‘ಕೊ : ಯಾದ್’ ಖ್ಯಾತಿಯ ಅಸ್ಸಾಮೀ ನಿರ್ದೇಶಕಿ ಮಂಜು ಬೋರಾ ಹಾಗೂ ‘72 ಹೂರೇ’ ಖ್ಯಾತಿಯ ನಿರ್ದೇಶಕ ಸಂಜಯ್ ಪುರಾಣ್ ಸಿಂಗ್ ಚೌಹಾನ್ ಆರ್‌ಎಸ್‌ಎಸ್ ಕುರಿತ ‘ಒನ್ ನೇಷನ್’ ಸರಣಿಗಾಗಿ ಕೈಜೋಡಿಸಿದ್ದಾರೆ.