18 ವರ್ಷಗಳ ವೃತ್ತಿಜೀವನ ಮತ್ತು 33 ಸಿನಿಮಾಗಳ ಬಳಿಕ 'ದಿ ಪ್ಯಾರಾಡೈಸ್' ಚಿತ್ರದ ಅನುಭವ ಹಾಗೂ ಸೋಲಿನ ಕುರಿತು ಮಾತನಾಡಿದ ನ್ಯಾಚುರಲ್ ಸ್ಟಾರ್ ನಾನಿ 
ಸಿನಿವಾಣಿ

18 ವರ್ಷ..33 ಸಿನಿಮಾ..ಆದರೆ, ಇದು ನನಗೆ ಹೊಸ ಅನುಭವ: 'ದಿ ಪ್ಯಾರಾಡೈಸ್​​' ಸೋಲಿನ ಬಗ್ಗೆ ನ್ಯಾಚುರಲ್ ಸ್ಟಾರ್​ ಬಿಚ್ಚು ನುಡಿ! Natural Star Nani

18 ವರ್ಷಗಳ ಸಿನಿಪಯಣ, 33 ಸಿನಿಮಾಗಳು.. ಆದರೆ 'ದಿ ಪ್ಯಾರಾಡೈಸ್' ಸೋಲು ಹಾಗೂ ಅನುಭವದ ಬಗ್ಗೆ ನ್ಯಾಚುರಲ್ ಸ್ಟಾರ್ ನಾನಿ ಬಿಚ್ಚಿಟ್ಟ ಆಸಕ್ತಿದಾಯಕ ಸಂಗತಿಗಳ ವಿವರ ಇಲ್ಲಿದೆ.

ಸಿನಿಮಾ: ನ್ಯಾಚುಲರ್​ ಸ್ಟಾರ್​ ಖ್ಯಾತಿಯ ನಾನಿ (Natural Star Nani) ಹಾಗೂ ಶ್ರೀಕಾಂತ್​ ಒಡೆಲಾ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ದಿ ಪ್ಯಾರಾಡೈಸ್​​' ಸಿನಿಮಾ ಬಿಡುಗಡೆ ಕಂಡಿದೆ. ಆದರೆ ಈ ಸಿನಿಮಾ ಬಿಡುಗಡೆಗೂ ಮುನ್ನ ಸೃಷ್ಟಿಯಾಗಿದ್ದ ನಿರೀಕ್ಷೆಯನ್ನು ತಲುಪುವಲ್ಲಿ ಈ ಸಿನಿಮಾ ವಿಫಲವಾಗಿದ್ದು, ಅಂದುಕೊಂಡ ಯಶಸ್ಸು ದೊರೆತಿಲ್ಲ ಎಂದರೆ ಸುಳ್ಳಲ್ಲ.

ಸಿನಿಮಾ ಬಿಡುಗಡೆ ನಂತರ, ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್​ ಒಡೆಲಾ ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ಜಂಟಿಯಾಗಿ ಮಾತುಕತೆ ನಡೆಸಿ, ಅಲ್ಲಿ ಪ್ಯಾರಾಡೈಸ್​ ಹಾಗೂ ತಮ್ಮ ಸಿನಿಮಾ ವೃತ್ತಿ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇದು ನನಗೆ ಹೊಸ ಅನುಭವ!

ದಿ ಪ್ಯಾರಾಡೈಸ್​ ಸಿನಿಮಾ ಫ್ಲಾಪ್​ ಆದ ಬಗ್ಗೆ ಮಾತನಾಡಿರುವ ನ್ಯಾಚುರಲ್​ ಸ್ಟಾರ್​ ನಾನಿ, ಕಳೆದ 18 ವರ್ಷಗಳಿಂದ ಸುಮಾರು 33 ಸಿನಿಮಾಗಳಲ್ಲಿ ನಾನು ಅಭಿನಯಿಸಿದ್ದೆನೆ. ಆದರೆ ಈ ಭಾರಿ ದೊರೆತ ಅನುಭವ ನನಗೆ ಹೊಸದಾಗಿದೆ. ನನ್ನ ಈ ಸಿನಿಮಾ ಬಹಳ ಜನರಿಗೆ ಇಷ್ಟವಾಗಿಲ್ಲ ಎನ್ನುವುದು ನಿಜ. ಆದರೆ ಈ ಸಿನಿಮಾವನ್ನು ನಾವು ಅತ್ಯಂತ ಪ್ರಾಮಾಣಿಕವಾಗಿ ನಿರ್ಮಿಸಿದ್ದೆವು. ಬಹುಶಃ ಈ ಸಿನಿಮಾ ನನಗೆ ವರ್ಕ್​ ಆಗಲಿಲ್ಲ ಎಂದು ಹೇಳುಬಹುದು ಎಂದು ನಾನಿ ನುಡಿದಿದ್ದಾರೆ.

ಆದರೂ ಜನ ನಮ್ಮ ಕೈ ಹಿಡಿದಿದ್ದಾರೆ!

ಮಾತು ಮುಂದುವರಿಸುತ್ತಾ ನಾನಿ, ನಾನು, ನೀನು (ಶ್ರೀಕಾಂತ್​) ಹಾಗೂ ನಮ್ಮ ಈಡೀ ಚಿತ್ರತಂಡ ಈ ಸಿನಿಮಾಗೆ ನಮ್ಮ ಸಕಲವನ್ನು ಅರ್ಪಿಸಿದ್ದೆವೆ. ಆದರೆ ಈ ಸಿನಿಮಾ ಹೆಚ್ಚಿನ ಜನರಿಗೆ ಇಷ್ಟವಾಗಿಲ್ಲ. ಇದರಿಂದ ನಮಗೆ ಕೆಲ ಸಮಸ್ಯೆಗಳು ಎದುರಾಗಿರುವುದು ನಿಜ. ಆದರೆ ಬಿಡುಗಡೆ ದಿನ ಪ್ರೇಕ್ಷಕರು ನಮ್ಮ ಸಿನಿಮಾವನ್ನು ಸ್ವಾಗತಿಸಿದ ರೀತಿ ನನಗೆ ವೈಯಕ್ತಿಕವಾಗಿ ಬಹಳ ಸಂತೋಷವನ್ನು ತಂದಿದೆ. ಜನ ನಮ್ಮ ಕೈಯನ್ನು ಯಾವತ್ತೂ ಬಿಡಲ್ಲ ಎಂಬ ನಂಬಿಕೆ ನನಗಿದೆ ಎಂದು ನಾನಿ ಹೇಳಿದ್ದಾರೆ.

ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ; 145 ಕೋಟಿ ಗಳಿಕೆ!

ಸಿನಿಮಾ ಬಿಡುಗಡೆ ನಂತರ ಹೊರಬಂದಿರುವ ವಿಮರ್ಶೆಗಳಲ್ಲಿ ಚಿತ್ರದ ಕಥೆ ಹಾಗೂ ಹಿಂಸಾತ್ಮಕ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಸಿನಿಮಾದ ಫಸ್ಟ್​ ಹಾಫ್​​ ಭರವಸೆ ಮೂಡಿಸಿದರೂ, ದ್ವಿತೀಯಾರ್ಧ ಪ್ರೇಕ್ಷಕರ ಮನವನ್ನು ತಲುಪುವುದರಲ್ಲಿ ವಿಫಲವಾಗಿದೆ ಎನ್ನುವುದು ಬಹತೇಕ ವಿಮರ್ಶಕರ ಅಭಿಪ್ರಾಯವಾಗಿದೆ.

ಆದರೆ, ನಾನಿ ತಮ್ಮ ಪಾತ್ರದಲ್ಲಿ ಉತ್ತಮವಾಗಿ ಕಂಡುಬಂದರೂ ಇತರೆ ಪಾತ್ರಗಳ ವೀಕ್​ ಆಗಿದ್ದವು ಎನ್ನಲಾಗುತ್ತಿದೆ. ಇಷ್ಟೆಲ್ಲಾ ಟ್ರೋಲ್​ ಹಾಗೂ ನೂನ್ಯತೆಯ ನಂತರವೂ ಭಾರತದಲ್ಲಿ ಸುಮಾರು 54 ಕೋಟಿ ಹಾಗೂ ವಿದೇಶದಲ್ಲಿ 22 ಕೋಟಿಗಳಿಸುವ ಮೂಲಕ ಮೊದಲ ದಿನ ಸುಮಾರು 76 ಕೋಟಿ ಗಳಿಕೆ ಮಾಡಿತ್ತು.

ಎರಡನೇ ದಿನ 14, ಮೂರನೇ ದಿನ 15, ನಾಲ್ಕನೇ ದಿನ 16, ಐದನೇ ದಿನ 5 ಹಾಗೂ ಇಂದು ತೆರೆಕಂಡ ಆರನೇ ದಿನ 2 ಕೋಟಿ ಗಳಿಕೆ ಮಾಡಿ ಸುಮಾರು 129 ಕೋಟಿ ಗಳಿಸಿದ್ದರೆ, ವಿದೇಶದಲ್ಲಿ ಇಲ್ಲಿವರೆಗೆ 24 ಕೋಟಿಗಳಿಕೆ ಮಾಡಿ 145 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್​).