ಬೆಂಗಳೂರು: ಈ ವರ್ಷದ ಮೊದಲಾರ್ಧ ಮುಗಿಸಿ ದ್ವಿತೀಯಾರ್ಧ ಕಡೆಗ ಮುಖ ಮಾಡಿರುವ ಭಾರತೀಯ ಚಲನಚಿತ್ರೋದ್ಯಮದಿಂದ ಹಲವು ಜಾನರ್ನ ಬಹುನಿರೀಕ್ಷಿತ ಸಿನಿಮಾಗಳೇ ಬೆಳ್ಳಿಪರದೆಗೆ ಎಂಟ್ರಿಕೊಡುತ್ತಿವೆ. ಈಗಾಗಲೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಿಂದ ಸಾಕಷ್ಟು ಚಿತ್ರಗಳು ತೆರೆಗೆ ಅಪ್ಪಳಿಸಿದ್ದು, ಈ ಪೈಕಿ 'ಧುರಂಧರ್ 2' (ಹಿಂದಿ), 'ಹನುಮಾನ್ ಅಂಶ್' (ಹಿಂದಿ), 'ಬೆತ್ಲಹೆಮ್ ಕುಟುಂಬ ಯೂನಿಟ್' (ಮಲಯಾಳಂ) ಸೇರಿದಂತೆ ಬೆರಳೆಣಿಕೆಯಷ್ಟು ಮಾತ್ರ ಸೂಪರ್ಹಿಟ್ ಕಂಡಿದ್ದಲ್ಲದೇ, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಕಂಡಿವೆ.
ಈಗ ದ್ವಿತೀಯಾರ್ಧದಲ್ಲಿ ಪೈಪೋಟಿಗಿಳಿದಿರುವ ಸಿನಿಮಾಗಳ ಪೈಕಿ ಇತ್ತೀಚೆಗಷ್ಟೇ ತೆರೆಕಂಡ ನ್ಯಾಚುರಲ್ ಸ್ಟಾರ್ ನಾನಿ ನಟನೆಯ 'ದಿ ಪ್ಯಾರಡೈಸ್' ಮತ್ತು ಯಶ್ ಅಭಿನಯದ 'ಟಾಕ್ಸಿಕ್'ನಂತಹ ಬಿಗ್ ಬಿಜೆಟ್ ಸಿನಿಮಾಗಳು ನಿರೀಕ್ಷೆಯ ಗಡಿಯನ್ನೂ ತಲುಪದೆ, ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳಿಗೆ ತುತ್ತಾಗಿ ಬಾಕ್ಸ್ ಆಫೀಸ್ ರೇಸ್ನಿಂದಲೇ ಹೊರಬಿದ್ದಿದೆ. ಮತ್ತೊಂದೆಡೆ, ನಿರ್ಮಾಪಕರು ಹಾಕಿದ್ದ ಬಂಡವಾಳವನ್ನೂ ಈ ಚಿತ್ರಗಳು ತಲುಪುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂಬುದು ನಿಜಕ್ಕೂ ಬೇಸರದ ಸಂಗತಿ.
ಸೆಪ್ಟೆಂಬರ್ ಮುಗಿದು ಈಗ ಅಕ್ಟೋಬರ್ಗೆ ಕಾಲಿಡುತ್ತಿದ್ದಂತೆ ಉತ್ತರಕ್ಕಿಂತ ದಕ್ಷಿಣ ಭಾರತದ ಹಲವು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಇದರಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳು ಮುಂಚೂಣಿಲ್ಲಿವೆ. ಹಾಗಿದ್ದರೆ, ಯಾವೆಲ್ಲ ಭಾಷೆಗಳ ಚಿತ್ರಗಳು ಈ ತಿಂಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಯಾವ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿವೆ ಎಂಬುದರ ವಿವರ ಇಲ್ಲಿದೆ ನೋಡಿ.
1. ಬೀರ್ಬಲ್ 2 (ಕನ್ನಡ)
ರಿಲೀಸ್: ಅಕ್ಟೋಬರ್ 23
2. ಜೈಲರ್ 2 (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 15
3. ಬತ್ತ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 1
4. ಬೇಲ್ (ಕನ್ನಡ)
ಬಿಡುಗಡೆ ದಿನಾಂಕ: ಅಕ್ಟೋಬರ್ 2
5. ಡೋಂಟ್ ಟ್ರಬಲ್ ದಿ ಟ್ರಬಲ್ (ತೆಲುಗು-ಮಲಯಾಳಂ)
ಬಿಡುಗಡೆ ದಿನಾಂಕ: ಅಕ್ಟೋಬರ್ 2, 2026
6. ಆದರ್ಶ ಕುಟುಂಬ ಮನೆ ನಂ: 47 - ಎಕೆ 47 (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 9
7. ಸಿಗ್ಮಾ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 2
8. ಯೆಝು ಕಡಲ್ ಏಳು ಮಲೈ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 1
9. ಇಟ್ಲು ಅರ್ಜುನ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 30
10. ಇರಂದು ವನಂ (ತಮಿಳು)
ಬಿಡುಗಡೆ ದಿನಾಂಕ: ಅಕ್ಟೋಬರ್ 23
11. #ಕಲ್ಟ್ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 30
12. ರಣಬಾಲಿ (ತೆಲುಗು)
ಬಿಡುಗಡೆ ದಿನಾಂಕ: ಅಕ್ಟೋಬರ್ 16
13. ದೃಶ್ಯಂ: ದಿ ಕನ್ಕ್ಲೂಷನ್ (ಹಿಂದಿ)
ಬಿಡುಗಡೆ ದಿನಾಂಕ: ಅಕ್ಟೋಬರ್ 02
14. ಪ್ರೇಮ್ ಕೀತನೂ (ಹಿಂದಿ)
ಬಿಡುಗಡೆ ದಿನಾಂಕ: ಅಕ್ಟೋಬರ್ 02
15. ನಯೀ ನವೇಲ್ಲಿ (ಹಿಂದಿ)
ಬಿಡುಗಡೆ ದಿನಾಂಕ: ಅಕ್ಟೋಬರ್ 16
16. ತು ಹೈ ಮೇರಿ ಕಿರಣ್ (ಹಿಂದಿ)
ಬಿಡುಗಡೆ ದಿನಾಂಕ: ಅಕ್ಟೋಬರ್ 23