| ಚೇತನ್ ನಾಡಿಗೇರ್ ಬೆಂಗಳೂರು
ನಗರದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಆತ್ಮಹತ್ಯೆಯ ಎಂಟನೇ ಪ್ರಕರಣ ಇದು. ಈ ಆತ್ಮಹತ್ಯೆಗಳ ರಹಸ್ಯವೇನು? ಇದನ್ನೆಲ್ಲ ಮಟ್ಟ ಹಾಕೋರು ಯಾರು?- ಇಂಥದ್ದೊಂದು ವಾರ್ತೆಯೊಂದಿಗೆ ಶುರುವಾಗುತ್ತದೆ ‘100’ ಸಿನಿಮಾ. ತಕ್ಷಣವೇ ಇನ್ಸ್ಪೆಕ್ಟರ್ ವಿಷ್ಣು ಎಂಟ್ರಿಯಾಗುತ್ತದೆ. ಈ ಪ್ರಕರಣವನ್ನು ಮಟ್ಟ ಹಾಕೋದು ಅದೇ ಪಾತ್ರ ಎಂದು ಆರಂಭದಲ್ಲೇ ಸ್ಪಷ್ಟವಾಗುತ್ತದೆ. ಆದರೆ, ಏನಿದು ಪ್ರಕರಣ? ಹೇಗೆ ಇದಕ್ಕೊಂದು ಅಂತ್ಯ? ಈ ಪ್ರಶ್ನೆಗಳಿಗೆ ‘100’ ಡಯಲ್ ಮಾಡಬೇಕು.
‘ಆಕ್ಸಿಡೆಂಟ್’ ಹೊರತುಪಡಿಸಿದರೆ, ರಮೇಶ್ ಇದುವರೆಗೂ ನಿರ್ದೇಶನ ಮಾಡಿರುವುದೆಲ್ಲ ಕಾಮಿಡಿ ಚಿತ್ರಗಳೇ. ಈ ಬಾರಿ ಅವರು ಗಂಭೀರವಾದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲರ ಮನೆಯಲ್ಲೂ, ಬದುಕಿನಲ್ಲೂ ನಡೆಯಬಹುದಾದ ಕಥೆಯೊಂದನ್ನು ಅವರು ಆಯ್ಕೆ ಮಾಡಿಕೊಂಡಿದ್ದು, ಅದನ್ನು ಅಷ್ಟೇ ಗಂಭೀರವಾಗಿ ನಿರೂಪಿಸಿದ್ದಾರೆ.
ಇಂಟರ್ನೆಟ್ ಕ್ರಾಂತಿ ದೊಡ್ಡದಾಗಿ ಸೋಷಿಯಲ್ ಮೀಡಿಯಾ ಅನಿವಾರ್ಯಗುತ್ತಿದ್ದಂತೆಯೇ, ಸೈಬರ್ ಕ್ರೖೆಮ್ ಸಹ ಹೆಚ್ಚಾಗುತ್ತಿದೆ. ಹಣಕಾಸಿನ ವಂಚನೆ ಜತೆಗೆ, ಭಾವನಾತ್ಮಕ ಮೋಸವೂ ಹೆಚ್ಚಾಗುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಹೆಣ್ಮಕ್ಕಳನ್ನು ಬ್ಲಾಕ್ವೆುೕಲ್ ಮಾಡುವ ಮತ್ತು ಅವರನ್ನು ಕಾಡುವ ದುರುಳರು ಹುಟ್ಟಿಕೊಂಡಿದ್ದಾರೆ. ಅದೇ ವಿಷಯವನ್ನಿಟ್ಟುಕೊಂಡು ಚಿತ್ರ ಮಾಡಿರುವ ರಮೇಶ್, ಒಬ್ಬ ಪೊಲೀಸ್ ಅಧಿಕಾರಿಯ ಕುಟುಂಬವರ್ಗವೇ ಈ ತರಹದ ಬ್ಲಾಕ್ವೆುೕಲ್ಗೆ ಒಳಗಾದಾಗ, ಅವರನ್ನು ರಕ್ಷಿಸಲು ಆ ಅಧಿಕಾರಿ ಯಾವ ಹಂತಕ್ಕೆ ಹೋಗುತ್ತಾನೆ ಎಂದು ತೋರಿಸಿದ್ದಾರೆ. ಎಲ್ಲ ಸರಿ, ನಗರದಲ್ಲಿ ನಡೆಯುವ ಹೆಣ್ಣುಮಕ್ಕಳ ಆತ್ಮಹತ್ಯೆಗಳಿಗೂ, ಪೊಲೀಸ್ ಅಧಿಕಾರಿ ಕುಟುಂಬದ ಬ್ಲಾಕ್ವೆುೕಲ್ ಪ್ರಕರಣಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಸಹಜ. ಅಲ್ಲೇ ಇರುವುದು ಟ್ವಿಸ್ಟು. ಅದಕ್ಕೇ ಹೇಳಿದ್ದು, ಅದು ಗೊತ್ತಾಗಬೇಕೆಂದರೆ, ‘100’ ಡಯಲ್ ಮಾಡಬೇಕು, ಅಲ್ಲಲ್ಲ ನೋಡಬೇಕು.
ಕ್ರೖೆಮ್ ಕುರಿತ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಬಂದಿವೆ. ಆದರೆ, ಸೈಬರ್ ಕ್ರೖೆಮ್ ಚಿತ್ರಗಳು ಕನ್ನಡಕ್ಕೆ ಅಷ್ಟೇನೂ ಪರಿಚಿತವಲ್ಲ. ಹೀಗೆ ಕನ್ನಡಕ್ಕೆ ಹೆಚ್ಚು ಪರಿಚಿತವಲ್ಲದ ಒಂದು ವಿಷಯವನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ ರಮೇಶ್. ಅದಕ್ಕೆ ಭಾವನೆಗಳ ಕಟ್ಟೆ ಕಟ್ಟಿ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದಾರೆ. ಥ್ರಿಲ್ಲರ್ ಚಿತ್ರಗಳು ಅಗತ್ಯಕ್ಕಿಂತ ಹೆಚ್ಚಾದರೆ, ಬೋರ್ ಆಗುತ್ತದೆ ಎಂದು ರಮೇಶ್ಗೆ ಗೊತ್ತಿಲ್ಲದೇನಲ್ಲ. ಅದೇ ಕಾರಣಕ್ಕೆ ಅವರು ಎಷ್ಟು ಬೇಕೋ ಅಷ್ಟು ಮಾತ್ರ ಹೇಳಿ, ಬೋರ್ ಆಗದಂತೆ ನೋಡಿಕೊಂಡಿದ್ದಾರೆ. ಸಂಕಲನ ಎಷ್ಟು ಹರಿತವಾಗಿದೆ ಎಂದರೆ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ.
ಈ ಎಷ್ಟು ಬೇಕೋ ಅಷ್ಟು ಪಾಲಿಸಿಯು ಅಭಿನಯದ ವಿಷಯದಲ್ಲೂ ಮುಂದುವರಿಯುತ್ತದೆ. ಪೊಲೀಸ್ ಅಧಿಕಾರಿಯಾಗಿ, ಅಣ್ಣನಾಗಿ, ಗಂಡನಾಗಿ ಮತ್ತು ಅಸಹಾಯಕ ಪ್ರಜೆಯಾಗಿ ... ಹೀಗೆ ರಮೇಶ್ ಹಲವು ಆಯಾಮಗಳಲ್ಲಿ ಕಾಣಿಸಿಕೊಂಡು ತಮ್ಮ ಅಭಿನಯದಿಂದ ಖುಷಿಕೊಡುತ್ತಾರೆ. ಪೂರ್ಣಾ, ರಚಿತಾ ರಾಮ್ ಪ್ರಕಾಶ್ ಬೆಳವಾಡಿ, ನವ ನಟ ವಿಶ್ವಕರ್ಣ... ಯಾರ ಅಭಿನಯದ ಬಗ್ಗೆಯೂ ತಕರಾರು ಎತ್ತುವಂತಿಲ್ಲ. ಸತ್ಯ ಹೆಗಡೆ ಛಾಯಾಗ್ರಹಣ, ರವಿ ಬಸ್ರೂರು ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.